ಮಧ್ಯರಾತ್ರಿ ಬಾಯಾರಿಕೆ ಕಾರಣವೇನು ಗೊತ್ತಾ?

0

ಮಧ್ಯರಾತ್ರಿ ಬಾಯಾರಿಕೆ ಕಾರಣವೇನು ಗೊತ್ತಾ?

ಆರೋಗ್ಯ: ಜನರು ರಾತ್ರಿ ಮಲಗೋಕ್ಕಿಂತ ಮೊದಲು ಸಾಕಷ್ಟು ನೀರು ಕುಡಿದು ಮಲಗಿಕೊಳ್ಳತ್ತಾರೆ. ಆದರೆ ಕೆಲವರಿಗೆ ಮಧ್ಯರಾತ್ರಿ ಗಂಟಲು ಒಣಗಿದಂತಾಗಿ ಮತ್ತೆ ನೀರು ಕುಡಿಬೇಕು ಅನ್ಸುತ್ತೆ.

ಈ ರೀತಿ ಯಾಕಾಗುತ್ತದೆ.?

ಅನೇಕ ಜನರು ಮಲಗಿರುವಾಗ ತಮ್ಮ ಬಾಯಿಯ ಮೂಲಕವೇ ಉಸಿರಾಡುತ್ತಾರೆ. ಇನ್ನೂ ಶೀತ ಅಥವಾ ಮೂಗು ಕಟ್ಟಿಕೊಂಡ ಸಂದರ್ಭದಲ್ಲಿ ಇದು ಸಾಮಾನ್ಯ.

ಅಸ್ತಮಾ ಇರುವವರು ಕೂಡ ಮೂಗಿಗಿಂತ ಬಾಯಿಯಲ್ಲಿ ಉಸಿರಾಡುತ್ತಾರೆ. ಇದರ ಪರಿಣಾಮ ಬಾಯಿ ಸುಲಭವಾಗಿ ಒಣಗುತ್ತದೆ. ಇದರಿಂದಾಗಿ ರಾತ್ರಿ ಸಮಯದಲ್ಲಿ ಆಗಾಗ ಎಚ್ಚರವಾಗುತ್ತದೆ.

ಧೂಮಪಾನ ಮತ್ತು ಮದ್ಯಪಾನ ಯಾರು ಹೆಚ್ಚಾಗಿ ಮಾಡುತ್ತಾರೋ ಅವರು ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಪ್ರತಿದಿನ ಧೂಮಪಾನ ಮತ್ತು ಮದ್ಯಪಾನ ಮಾಡುವ ಶೇ. 39 ರಷ್ಟು ಜನರಲ್ಲಿ ಲಾಲಾರಸದ ಉತ್ಪಾದನೆ ಕಡಿಮೆಯಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಆಲ್ಕೋಹಾಲ್ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ನೀರಿನ ಅಗತ್ಯವನ್ನು ಸೃಷ್ಟಿಸುತ್ತದೆ. ಅಧಿಕ ರಕ್ತದೊತ್ತಡ ಇರುವವರು ಅತಿಯಾದ ಬೆವರುವಿಕೆಯಿಂದ ದೇಹದಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತದೆ. ಇದು ಒಣ ಗಂಟಲಿಗೆ ಕಾರಣವಾಗುತ್ತದೆ.

ಯಕೃತ್ತು, ಹೃದಯ ಮತ್ತು ಮೂತ್ರಪಿಂಡಗಳು ತಮ್ಮ ಕಾರ್ಯವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತವೆ. ಈ ಸಮಸ್ಯೆಯು ಮಧ್ಯರಾತ್ರಿಯಲ್ಲಿ ಬಾಯಾರಿಕೆಗೆ ಕಾರಣವಾಗುತ್ತದೆ ಎನ್ನಲಾಗಿದೆ.

ಬಹಳ ಮಂದಿ ಅಡುಗೆಯಲ್ಲಿ ಸಾಕಷ್ಟು ಎಣ್ಣೆ ಮತ್ತು ಮಸಾಲೆ ಇಲ್ಲದಿದ್ದರೆ ತಿನ್ನೋದೆ ಇಲ್ಲ. ಆದರೆ ಹೆಚ್ಚುವರಿ ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವನ್ನು ತಿನ್ನುವುದು ಒಣ ಗಂಟಲಿನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರಿಂದ ರಾತ್ರಿ ಬಾಯಾರಿಕೆ ಉಂಟಾಗುತ್ತದೆ.

ನಿರ್ಜಲೀಕರಣ ಅಥವಾ ಅಜೀರ್ಣವು ರಾತ್ರಿ ನಿದ್ರೆಯ ಸಮಯದಲ್ಲಿ ಗಂಟಲು ಒಣಗಲು ಒಂದು ಪ್ರಮುಖ ಕಾರಣವಾಗಿದೆ. ದೇಹದಲ್ಲಿ ನೀರಿನಾಂಶ ಕಡಿಮೆಯಾದಾಗ ಗಂಟಲು ಒಣಗುತ್ತದೆ. ನಿರ್ಜಲೀಕರಣವು ತೀವ್ರವಾಗಿದ್ದರೆ, ಅದು ಸಾವಿಗೂ ಕಾರಣವಾಗಬಹುದು.

ಬಾಯಿ ಒಣಗುವುದನ್ನು ಜೆರೊಸ್ಟೊಮಿಯಾ ಎಂತಲೂ ಕರೆಯುತ್ತಾರೆ. ಇದರಿಂದ ಬಾಯಿಯಲ್ಲಿ ಜೊಲ್ಲು ಸುರಿಸುವುದು ಕಡಿಮೆಯಾಗುತ್ತದೆ. ಇದು ಸೆಪ್ಸಿಸ್​ನಂತಹ ಗಂಭೀರ ಕಾಯಿಲೆಗಳ ಲಕ್ಷಣವಾಗಿದ್ದು, ಇದರಿಂದಾಗಿ ಮಧ್ಯರಾತ್ರಿಯಲ್ಲಿ ಬಾಯಾರಿಕೆಯಾಗುತ್ತದೆ.