ಹುಲಿ ಉಗುರಿನ ಪೆಂಡೆಂಟ್ ಕೇಸ್ : ಡಿಆರ್ಎಫ್ಒ ಬಂಧನ.!

0

ಹುಲಿ ಉಗುರಿನ ಪೆಂಡೆಂಟ್ ಕೇಸ್ : ಡಿಆರ್ಎಫ್ಒ ಬಂಧನ.!

ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬೆನ್ನಲ್ಲೇ ರಾಜ್ಯದಲ್ಲಿ ಹುಲಿ ಉಗುರಿನ ಸದ್ದು ಜೋರಾಗಿದೆ. ಅದರಲ್ಲೂ ಹುಲಿ ಉಗುರು ಧರಿಸಿರುವ ರಾಜಕಾರಣಿಗಳು, ಚಿತ್ರ ನಟರಿಗೆ ಮತ್ತು ವಿಐಪಿಗಳಿಗೆ ತುಂಬಾನೇ ತಲೆನೋವು ಶುರುವಾಗಿದೆ.

ಕನ್ನಡದ ಅನೇಕ ಖ್ಯಾತ ನಟರ ವಿರುದ್ಧ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪ ಕೇಳಿ ಬರುತ್ತಿದೆ. ಅಷ್ಟೆ ಏಕೆ ನಟರ ಜೊತೆ ಜೊತೆಗೆ ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು ಹಾಗು ರಾಜಕೀಯ ನಾಯಕರು ಕೂಡ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಆರೋಪ ಕೇಳಿ ಬರತೊಡಗಿದೆ.

ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ವಲಯ ಅರಣ್ಯಾಧಿಕಾರಿ (ಡಿಆರ್ಎಫ್ಒ) ಎಂ. ದರ್ಶನ್ ಕುಮಾರ ಅವರ ವಿರುದ್ಧ ದೂರು ಕೂಡಾ ದಾಖಲಾಗಿತ್ತು.

ಉಪ ವಲಯ ಅರಣ್ಯಾಧಿಕಾರಿ ಎಂ. ದರ್ಶನ್ ಕುಮಾರ ಅವರ ವಿರುದ್ಧ ದೂರು ದಾಖಲಾದ ಹಿನ್ನಲೆಯಲ್ಲಿ ಅವರನ್ನು ತನಿಖೆಗೆ ಹಾಜರಾಗುವಂತೆ ತಿಳಿಸಲಾಗಿತ್ತು. ಆದರೆ ತನಿಖೆಗೆ ಹಾಜರಾಗದೆ ಮೊಬಾಯಿಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.

ಆದರೆ ಇಂದು (ದಿ.27) ಅಧಿಕಾರಿಗಳ ತಂಡ ಡಿಆರ್ಎಫ್ಒ ದರ್ಶನ್ ಅವರನ್ನು ಬಂಧಿಸಿ ಕೊಪ್ಪ ಡಿಸಿಎಫ್ ನಂದೀಶ್ ಮುಂದೆ ಹಾಜರ ಪಡಿಸಿದ್ದರು. ಈ ಹಿನ್ನಲೆಯಲ್ಲಿ ಎಂ. ದರ್ಶನ್ ಕುಮಾರ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಗುರುವಾರ ಅರೆನೂರು ಗ್ರಾಮದ ಸುಪ್ರೀತ್ ಮತ್ತು ಅಬ್ದುಲ್ ಅವರು, ಕಳಸ ಡಿಆರ್ಎಫ್ಒ ದರ್ಶನ್ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಿ ಎಂದು ಚಿಕ್ಕಮಗಳೂರು ಜಿಲ್ಲೆ ಆಲ್ದೂರು ವಲಯ ಅರಣ್ಯಾಧಿಕಾರಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಲಿಖಿತ ದೂರು ನೀಡಿದ್ದರು