ರೈಲಿಗೆ ಸಿಲುಕಿ ಮೂವರು ವಿಕಲಚೇತನ ಮಕ್ಕಳ ಸಾವು.!

0

ರೈಲಿಗೆ ಸಿಲುಕಿ ಮೂವರು ವಿಕಲಚೇತನ ಮಕ್ಕಳ ಸಾವು.!

ಇಬ್ಬರು ಸಹೋದರರು ಸೇರಿದಂತೆ ಮೂವರು ವಿಕಲಚೇತನ ಮಕ್ಕಳು ಉಪನಗರ ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ಚೆನ್ನೈ ನಗರದ ಹೊರವಲಯದ ಉರಪಕ್ಕಂ ಸಮೀಪ ನಡೆದಿದೆ ಎಂದು ವರದಿಯಿಂದ ತಿಳಿದುಬಂದಿದೆ ‌

ಮೃತರು ಕರ್ನಾಟಕ ಮೂಲದ 11 ರಿಂದ 15 ವರ್ಷದೊಳಗಿನ ಮಕ್ಕಳು ಎನ್ನಲಾಗಿದೆ. 

ಸಾವಿಗೀಡಾದವರು ಸುರೇಶ್ (15), ಸಹೋದರ ರವಿ (12) ಮತ್ತು ಮಂಜುನಾಥ್ (11) ಎಂದು ವರದಿಯಾಗಿದೆ. 

ರೈಲು ಬರುತ್ತಿರುವುದು ಗಮನಕ್ಕೆ ಬಾರದೇ ಹಳಿ ದಾಟುವ ವೇಳೆ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮೂವರಲ್ಲಿ ಇಬ್ಬರು ಸಹೋದರರು ಕಿವುಡ ಮತ್ತು ಮೂಗರಾಗಿದ್ದರು. ಇನ್ನೂ ಮೂರನೇಯವನಿಗೆ ಮಾತು ಬರುತ್ತಿರಲಿಲ್ಲ. ಅವರ ಪೋಷಕರು ಚೆನ್ನೈನಲ್ಲಿ ದಿನಗೂಲಿ ನೌಕರರಾಗಿದ್ದರು. 

ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.