ಆರ್ಥಿಕ ಸಮಾನತೆಗೆ ಬ್ಯಾಂಕ್‌ಗಳ ಪಾತ್ರ ಬಹಳ ಮುಖ್ಯ: ಶ್ರೀಶೈಲ ಶ್ರೀಗಳ ಅಭಿಮತ

0

ಶಿರಗುಪ್ಪಿಯಲ್ಲಿ ಸಾ.ರೆ. ಪಾಟೀಲ ಸಹಕಾರಿ ಬ್ಯಾಂಕಿನ ನೂತನ ಶಾಖೆ ಉದ್ಘಾಟನೆ

ಆರ್ಥಿಕ ಸಮಾನತೆಗೆ ಬ್ಯಾಂಕ್‌ಗಳ ಪಾತ್ರ ಬಹಳ ಮುಖ್ಯ: ಶ್ರೀಶೈಲ ಶ್ರೀಗಳ ಅಭಿಮತ

ಬ್ಯಾಂಕ್‌ಗಳು ಹಣ ಉಳ್ಳವರಿಂದ ಠೇವಣಿ ಪಡೆದು, ಹಣದ ಅವಶ್ಯಕತೆ ಇರುವವರಿಗೆ ಸಾಲ ವಿತರಿಸಿ, ಸಮಾಜದಲ್ಲಿ ಆರ್ಥಿಕ ಸಮಾನತೆಗಾಗಿ ಬಹಳ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಈ ನಿಟ್ಟಿನಲ್ಲಿ ಸಾ.ರೆ. ಪಾಟೀಲ ಸಹಕಾರಿ ಬ್ಯಾಂಕ್ ಕೂಡಾ ಈ ಭಾಗದ ಜನರ ಆರ್ಥಿಕ ಪ್ರಗತಿಗೆ ಪೂರಕವಾಗಿ ಬೆಳೆಯಬೇಕೆಂದು ಶ್ರೀಶೈಲ ಜಗದ್ದುರುಗಳಾದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದ್ದಾರೆ.

ಅವರು ತಾಲೂಕಿನ ಶಿರಗುಪ್ಪಿಯಲ್ಲಿ ಡಾ. ಅಪ್ಪಾಸಾಹೇಬ ಉರ್ಫ ಸಾ.ರೆ. ಪಾಟೀಲ ಜಯಸಿಂಗಪೂರ-ಉದಗಾAವ ಸಹಕಾರಿ ಬ್ಯಾಂಕಿನ ಶಾಖೆಯನ್ನು ಉದ್ಘಾಟಿಸಿ, ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ, ಮಾತನಾಡುತ್ತಿದ್ದರು. ಮನುಷ್ಯನ ಭೌತಿಕ ಕಾರ್ಯಗಳಿಗೆ ಹಣದ ಅವಶ್ಯಕತೆ ಇರುತ್ತದೆ. ಪ್ರಾಮಾಣಿಕತೆಯಿಂದ ಗಳಿಸಿದ ಹಣ ನೆಮ್ಮದಿಯನ್ನು ನೀಡುತ್ತದೆ. ಬ್ಯಾಂಕ್‌ಗಳು ಸಮಾಜದ ಆರ್ಥಿಕ ಅಸಮತೋಲನೆಯನ್ನು ಹೋಗಲಾಡಿಸಲು, ಸಮಾಜದ ಪ್ರತಿಯೊಂದು ವರ್ಗದ ಏಳಿಗೆಗಾಗಿ ಶ್ರಮಿಸಬೇಕು. ಅದರಂತೆ ಸಾ.ರೆ. ಪಾಟೀಲ ಸಹಕಾರಿ ಬ್ಯಾಂಕ್ ಕೂಡ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ, ಇನ್ನೂ ಎತ್ತರೆತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ಶಿರೋಳ ಶ್ರೀ ದತ್ತ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಗಣಪತರಾವ ಪಾಟೀಲ ವಹಿಸಿದ್ದರು. ಬ್ಯಾಂಕಿನ ಎಂಡಿ ಜನಾರ್ಧನ ಬೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಮಾಂಗಲೇಕರ ಬ್ಯಾಂಕಿನ ಕುರಿತು ಮಾಹಿತಿ ನೀಡಿದರು.

ಈ ಸಮಯದಲ್ಲಿ ಶಿರಗುಪ್ಪಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಕಲ್ಲಪ್ಪಣ್ಣಾ ಮಗ್ಗೆನ್ನವರ, ಶ್ರೀ ದತ್ತ ಕಾರ್ಖಾನೆಯ ವೈಸ್ ಚೇರಮನ್ ಅರುಣ ದೇಸಾಯಿ, ಸಂಚಾಲಕರಾದ ಅಮರ ಯಾದವ, ಇಂದ್ರಜೀತ ಪಾಟೀಲ, ಸಿಬಿಕೆಎಸ್‌ಎಸ್‌ಕೆಯ ಸಂಚಾಲಕರಾದ ಅಣ್ಣಾಸಾಬ ಪಾಟೀಲ, ಮಹಾವೀರ ಕಾತ್ರಾಳೆ, ಭಮಣ್ಣಾ ಚೌಗುಲೆ, ಸುರೇಶ ಚೌಗುಲೆ, ಅಭಯ ಅಕಿವಾಟೆ, ಮೋಹನ ಲೋಕರೆ, ಅಶೋಕ ಕೋಳೆಕರ, ದರಗು ಗಾವಡೆ, ವಿನಾಯಕ ಕದಂ, ಮಿಲಿಂದ ಜಗದಾಳೆ, ಜೋತ್ಯಿಕುಮಾರ ಪಾಟೀಲ, ಸೌರಭ ಪಾಟೀಲ, ಗಣಪತಿ ಧನವಡೆ, ಅಶೋಕ ಬಾಮನೆ, ಎಂ.ಡಿ. ಕುಲಕರ್ಣಿ, ವಿಶ್ವನಾಥ ಮಾನೆ, ಶಿರೀಷ ಪಾಟೀಲ, ಕೆ.ಆರ್. ಪಾಟೀಲ ಸೇರಿದಂತೆ ಗ್ರಾಮಸ್ಥರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.