ಮಕ್ಕಳ ದೈಹಿಕ ಬೆಳವಣಿಗೆಗೆ ಕ್ರೀಡಾ ಸ್ಪರ್ಧೆಗಳು ಅತಿ ಅವಶ್ಯಕ

0

ಮಕ್ಕಳ ದೈಹಿಕ ಬೆಳವಣಿಗೆಗೆ ಕ್ರೀಡಾ ಸ್ಪರ್ಧೆಗಳು ಅತಿ ಅವಶ್ಯಕ

ಮಕ್ಕಳು ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲಿಯೂ ಸಕ್ರೀಯವಾಗಿ ಭಾಗವಹಿಸಿ, ಎಲ್ಲ ಕ್ಷೇತ್ರಗಳಲ್ಲಿಯೂ ಯಸಶ್ವಿಯಾಗಿ ಹೊರಹೊಮ್ಮಬೇಕು.

ಪಾಲಕರು ಮಕ್ಕಳಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರೋತ್ಸಾಹ ನೀಡಬೇಕೆಂದು ಐನಾಪೂರ ಗುರುದೇವಾಶ್ರಮದ ಪ.ಪೂ. ಬಸವೇಶ್ವರ ಶ್ರೀಗಳು ಹೇಳಿದರು, ಅವರು ರವಿವಾರ ಡಿ. 16 ರಂದು ಕಾಗವಾಡ ಪಟ್ಟಣದ ಮಲ್ಲಿಕಾರ್ಜುನ ವಿದ್ಯಾಲಯದಲ್ಲಿ ಬೆಳಗಾವಿ ಜಿಲ್ಲಾ ವುಶು ಸಂಸ್ಥೆ (ರಿ) ಇವರು ಆಯೋಜಿಸಿರುವ ಜಿಲ್ಲಾ ಮಟ್ಟದ ವುಶು (ಕುಂಗ್-ಫೂ) ಸ್ಪರ್ಧೆಗಳನ್ನು ಉದ್ಘಾಟಿಸಿ, ಮಾತನಾಡಿದ್ದಾರೆ.

ಈ ಸ್ಪರ್ಧೆಗಳು ಡಿ. 16 ರಂದು ಪ್ರಾರಂಭಗೊಂಡಿದ್ದು, ಡಿ.17 ರಂದು ಕೊನೆಗೊಳ್ಳಲಿವೆ, ಎರಡು ದಿನಗಳ ಕಾಲ ನಡೆಯಲಿರುವ ಈ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯಿಂದ ಸುಮಾರು 200 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ, ಸಸಿಗೆ ನೀರೆರೆದು ಕ್ರೀಡಾಂಗಣದ ಪೂಜೆಯೊಂದಿಗೆ ಸಾಂಕೇತಿಕವಾಗಿ ಸ್ಪರ್ಧೆಗಳಗಿಗೆ ಚಾಲನೆ ನೀಡಲಾಯಿತು, ಸ್ಪರ್ಧೆಗಳ ಉದ್ಘಾಟಕರಾಗಿ ಶಾಸಕ ರಾಜು ಕಾಗೆ ಆಗಮಿಸಿ, ಮಾತನಾಡಿದರು.

ಈ ವೇಳೆ ಶಾಸಕ ರಾಜು ಕಾಗೆ, ಸಂಗಮೇಶ ಲಯದಗುಂದಿ, ಸೌರಭ ಪಾಟೀಲ, ಡಾ.ಅಮೋಲ ಸರಡೆ, ಮಹೇಶ ಪಾಟೀಲ, ಶಂಕರ ವಾಘಮೋಡೆ, ಶಾಂಥಿನಾಥ ಕರವ, ಸುಧೀರ ಕರವ, ಮಾಸ್ಟರ್‌ಗಳಾದ ಸಂದೀಪ ಪಾಟೀಲ, ರೋಹಿತ ಘುನಕೆ, ಅಭಿಷೇಕ ಸುತಾರ, ಸಂತೋಶ ಜಿರನಾಳೆ, ಮಂಜುನಾಥ ಕೆಂಗೆರಿ, ಜ್ಯೋತಿ ಘಾಟಗೆ, ವೈಷ್ಣವಿ ಖಡಕೆ, ದೀಪಾಲಿ ಮಂಗಸೂಳೆ, ಅಭಿಷೇಕ ಭರಮೆ, ರಾಹುಲ ಬಾಗಡಿ, ಸುನೀಲ ವಾಘಮೋಡೆ ಸೇರಿದಂತೆ ಅನೇಕ ಗಣ್ಯರು, ವುಶು ಸ್ಪರ್ಧಾಳುಗಳು, ಪಾಲಕರು ಉಪಸ್ಥಿತರಿದ್ದರು.

ಫೋಟೋ ಶಿರ್ಷಿಕೆ: (17 ಕಾಗವಾಡ-1) ಸಸಿಗೆ ನೀರೇರೆದು ವುಶು ಸ್ಪರ್ಧೆಗಳಿಗೆ ಚಾಲನೆ ನೀಡುತ್ತಿರುವ ಬಸವೇಶ್ವರ ಶ್ರೀಗಳು, ರಾಜು ಕಾಗೆ, ಅಮೋಲ ಸರಡೆ, ಸೌರಭ ಪಾಟೀಲ, ಸಂಗಮೇಶ ಲಯದಗುಂದಿ, ಶಂಕರ ವಾಘಮೋಡೆ ಸೇರಿದಂತೆ ಇತರ ಕಾಣಬಹುದು.

ವರದಿ: ಭಾಸ್ಕರ ಐಹೊಳೆ ಕಾಗವಾಡ.