ರಾಮ ಮಂದಿರ ಪೂಜಾ ಆರಂಭ, ಎಲ್ಲ ರಾಮ ಭಕ್ತರಿಗೆ ತಲುಪಲಿದೆ ಪ್ರಸಾದ!

0

ರಾಮ ಮಂದಿರ ಪೂಜಾ ಆರಂಭ, ಎಲ್ಲ ರಾಮ ಭಕ್ತರಿಗೆ ತಲುಪಲಿದೆ  ಪ್ರಸಾದ!

ಆಯೋಧ್ಯೆ: ಶ್ರೀ ರಾಮ ಮಂದಿರ ದರ್ಶನಕ್ಕೆ ಭಕ್ತರು ಕಾಯುತ್ತಿದ್ದಾರೆ. ಬರೋಬ್ಬರಿ 500 ವರ್ಷಗಳ ಕಾಲ ಬಂಧಿಯಾಗಿದ್ದ ಶ್ರೀರಾಮ ಇದೀಗ ಭವ್ಯ ಮಂದಿರದಲ್ಲಿ ವಿರಾಜಮಾನವಾಗುವ ಕಾಲ ಸನ್ನಿಹತವಾಗಿದೆ. ಜನವರಿ 22 ರಂದು ಶ್ರೀ ರಾಮ ಮಂದಿರ ಉದ್ಘಾಟನೆಗೊಳ್ಳುತ್ತಿದೆ. ಆಧರೆ ಇಂದಿನಿಂದಲೇ ಪೂಜಾ ಕಾರ್ಯಕ್ರಮಗಳು ಆರಂಭಗೊಂಡಿದೆ. ಸಂಪೂರ್ಣ ಆಯೋಧ್ಯೆ ಕಂಗೊಳಿಸುತ್ತಿದೆ. ದಶರಥ ಮಹಾರಾಜನ ಕಾಲದ ವೈಭವಕ್ಕೆ ಇದೀಗ ಆಯೋಧ್ಯೆ ಮರಳುತ್ತಿದೆ. ಇಂದು ರಾಮ ಮಂದಿರದಲ್ಲಿ ಅಕ್ಷತ ಪೂಜೆ ನಡೆಯಲಿದೆ. ಪೂಜೆಯ ಬಳಿಕ ಅಕ್ಷತೆ ಪ್ರಸಾದವನ್ನು ದೇಶದ ರಾಮ ಭಕ್ತರಿಗೆ ವಿತರಣೆ ಮಾಡಲಾಗುತ್ತದೆ.

ಅಕ್ಷತೆ ಪೂಜೆಗಾಗಿ 1,000 ಕೆಜಿ. ಅಕ್ಕಿಯನ್ನು ಅರಶಿನ ಹಾಗೂ ಶುದ್ಧ ದೇಸಿ ತುಪ್ಪದಲ್ಲಿ ಮಿಶ್ರಿತ ಮಾಡಿ ಪೂಜೆ ಮಾಡಲಾಗುತ್ತದೆ. ಪೂಜೆ ಬಳಿಕ ಅಕ್ಷತೆ ಪ್ರಸಾದವನ್ನು ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ಸ್ವಯಂ ಸೇವಕರು ದೇಶದ ಹಳ್ಳಿ ಹಳ್ಳಿಗೆ ವಿತರಣೆ ಮಾಡಲಿದ್ದಾರೆ. ಶ್ರೀ ರಾಮ ಮಂದಿರ ಉದ್ಘಾಟನೆಗೂ ಮೊದಲು ಈ ಪ್ರಸಾದ ರಾಮ ಭಕ್ತರ ಕೈಸೇರಲಿದೆ.

1000 ಕೆಜಿ ಅಕ್ಕಿ ಬಳಸಿ ಅಕ್ಷತೆ ಪೂಜೆ ಮಾಡಲಾಗುತ್ತದೆ. ಈ ಅಕ್ಕಿಗೆ 100 ಕ್ವಿಂಟಾಲ್ ಅಕ್ಕಿ ಸೇರಿಸಿ ಭಾರತದ ಹಳ್ಳಿ ಹಳ್ಳಿಗೆ ವಿತರಣೆಯಾಗಲಿದೆ. ಭಾರತದ 5 ಲಕ್ಷ ಹಳ್ಳಿಗೆ ರಾಮ ಮಂದಿರದ ಅಕ್ಷತೆ ಪೂಜೆ ಪ್ರಸಾದ ವಿತರಣೆ ಮಾಡಲಾಗುತ್ತದೆ. ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಭಾರತದಲ್ಲಿ ಮತ್ತೆ ರಾಮನ ಯುಗ ಆರಂಭಗೊಳ್ಳುತ್ತಿದೆ.

ಇನ್ನು ಜನವರಿ ಆರಂಭದಿಂದಲೇ ಆಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣಪ್ರತಿಷ್ಠಾಪನೆ ತಯಾರಿ ಆರಂಭಗೊಳ್ಳಲಿದೆ.

ಜನವರಿ 16 ರಂದು ರಾಮ ಮಂದಿರ ಪ್ರಾಣಪ್ರತಿಷ್ಠಾಪನೆ ಪೂಜೆಗಳು ಆರಂಭಗೊಳ್ಳುತ್ತದೆ.

ಜನವರಿ 17 ರಂದು ರಾಮಲಲ್ಲಾ ಮೂರ್ತಿಯ ಬೃಹತ್ ಶೋಭಯಾತ್ರೆ ನಡೆಯಲಿದೆ.

ಜನವರಿ 18 ರಂದು ಪ್ರಾಣ ಪ್ರತಿಷ್ಠಾಪನೆ ವಿಧಾನ ಆರಂಭಗೊಳ್ಳುತ್ತಿದೆ.

ಇದೇ ದಿನ ವಾಯು ಮತ್ತು ವರುಣ ಪೂಜೆಯೂ ನಡೆಯಲಿದೆ.

ಜನವರಿ 19 ರಂದು ಅಗ್ನಿ ಸ್ಥಾಪನಾ ದಿನವಿಧಿ ಆಚರಣೆ ನಡೆಯಲಿದೆ.

ಬಳಿಕ ವಾಸ್ತು ಶಾಂತಿ ಪೂಜೆ ನೆರವೇರಲಿದೆ.

ಜನವರಿ 20 ರಂದು ಗರ್ಭಗುಡಿ ಶುದ್ಧಿಕರಣ ಕಾರ್ಯ ನಡೆಯಲಿದೆ.

ಜನವರಿ 21 ರಂದು ರಾಮಲಲ್ಲಾ ಮೂರ್ತಿೆ 125 ಕಲಶಾಭೀಷೇಕ ನಡೆಯಲಿದೆ.

ಜನವರಿ 22 ರಂದು ರಾಮ ಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ.

ಸದ್ಯ ಇರುವ ರಾಮ ಲಲ್ಲಾ ಮೂರ್ತಿಯನ್ನು ಪ್ರಧಾನಿ ಮೋದಿ ಹೊತ್ತು ನೂತನ ರಾಮ ಮಂದಿರಕ್ಕೆ ತರಲಿದ್ದಾರೆ. ಪ್ರತಿಷ್ಠಾಪನೆ ಬಳಿಕ ಮಹಾವಿಷ್ಠು ಪೂಜೆ,ಶೋಡಶೋಪಚಾರ ಪೂಜೆ, ಮೊದಲ ಆರತಿ ನಡೆಯಲಿದೆ.

Amazon offers : Click here.

Guruvani Digital Media