ಹುಕ್ಕೇರಿ ತಾಲೂಕಿನ ಶಿರೂರು ಡ್ಯಾಂ ಹತ್ತಿರ ಹೆಬ್ಬಾವು ಪ್ರತ್ಯೆಕ್ಷ, ಹುಕ್ಕೇರಿ ಉರಗ ತಜ್ಞರಿಂದ ರಕ್ಷಣೆ

0

ಹುಕ್ಕೇರಿ ತಾಲೂಕಿನ ಶಿರೂರು ಡ್ಯಾಂ ಹತ್ತಿರ ಹೆಬ್ಬಾವು ಪ್ರತ್ಯೆಕ್ಷ, ಹುಕ್ಕೇರಿ ಉರಗ ತಜ್ಞರಿಂದ ರಕ್ಷಣೆ


ಯಮಕನಮರಡಿ: ಬಸ್ಸಾಪೂರ ಹತ್ತಿರದ ಶಿರೂರ ಡ್ಯಾಂ ಪರಿಸರದಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದೆ. ಬೆಳಗಿನ ಜಾವ ಶಿರೂರ ಡ್ಯಾಂ ಪರಿಸರದಲ್ಲಿ ಬೃಹತ್ ಆಕಾರದ ಹೆಬ್ಬಾವು ಕಂಡು ಬಂದಿದ್ದರಿಂದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಅರಣ್ಯ ಅಧಿಕಾರಿ ಪ್ರಸನ್ನ ಬೆಲ್ಲದ ಆಗಮಿಸಿ ಹೆಬ್ಬಾವು ಇರುವದು ಖಚಿತ ಪಡಿಸಿಕೊಂಡು ಹುಕ್ಕೇರಿ ಪಟ್ಟಣದ ಉರಗ ತಜ್ಞರು ಅನಿಲ ಬಡಿಗೇರ ತಂಡವನ್ನು ಕರೆಸಿಕೊಂಡು ಹೆಬ್ಬಾವ ಹಿಡಿಯಲು ಯಶಸ್ವಿಯಾಗಿದ್ದಾರೆ.


ಈ ಭಾಗದಲ್ಲಿ ಅಪರೂಪವಾದ ಹೆಬ್ಬಾವು ಕಂಡು ಜನರು ಭಯ ಭೀತರಾದರು, ಉರಗ ತಜ್ಞರು ಅನಿಲ ಬಡಿಗೇರ ಮತ್ತು ಅವರ ತಂಡ ಅತಿ ಚಾಣಾಕ್ಷ ತನದಿಂದ ಹಾವನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟರು.

ಉರಗ ತಜ್ಞ ಅನಿಲ ಬಡಿಗೇರ ತಂಡದ ಕಾರ್ಯವನ್ನು ಮೆಚ್ವಿಸಿ ಶ್ಲಾಘಿಸಿದರು, ಈ ಸಂದರ್ಬದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಎಂ ಪಿ ಪೂಜಾರ, ಎಸ್ ಪಿ ಕುರಪಿ, ಮಾರುತಿ ಭಜಂತ್ರಿ, ಉಪಸ್ಥಿತರಿದ್ದರು.


ಪೋಟೋ ಶೀರ್ಷಿಕೆ: ವಾಯ.ಎಮ್ ಕೆ
ಯಮಕನಮರಡಿ ಸಮಿಪ ಶಿರೂರ ಬಳಿ ಪ್ರತ್ಯಕ್ಷವಾದ ಹೆಬ್ಬಾವು ರಕ್ಷಣೆಮಾಡಿದ ಹುಕ್ಕೇರಿ ಯ ಉರಗ ತಜ್ಞರು ಅಮಿಲ ಬಡಿಗೇರ ತಂಡ.

ವರದಿ- ಬಿ ಎಮ್ ಗ್ಯಾಳಗೋಳ.