ಆಧಾರ ಕಾರ್ಡ್ ಗೆ ಒಂದು ಕ್ವಾಟರ್ ಫ್ರೀ ಕೊಡಿ ಎಂದು ತಮ್ಮ ಅಳಲನ್ನು ತೊಡಿಕೊಂಡ ಮದ್ಯ ಪ್ರಿಯರು !

0

ಆಧಾರ ಕಾರ್ಡ್ ಗೆ ಒಂದು ಕ್ವಾಟರ್ ಫ್ರೀ ಕೊಡಿ ಎಂದು ತಮ್ಮ ಅಳಲನ್ನು ತೊಡಿಕೊಂಡ ಮದ್ಯ ಪ್ರಿಯರು !

ಏನಪ್ಪಾ ಇದು ಆಧಾರ ಕಾರ್ಡ್ ಗೆ ಒಂದು ಕ್ವಾಟರ್ ಫ್ರೀ ಕೊಡಿ ಎಂದು ಮದ್ಯ ಪ್ರಿಯರು ಕೇಳತ್ತಿದ್ದಾರಲ್ಲ ನಮ್ಮ ಜನ, ಮುಂದೇ ಇನ್ನೆನೋ ಕೆಳಬಹುದು ಎಂದು ಸಚ್ಚಿವರ ಮುಖದಲ್ಲಿ ನಗು ಹೊರಹೊಮ್ಮಿದ ಘಟನೆ ನಡದಿದೆ.

ಮದ್ಯಪ್ರೀಯರನ್ನು ಸಮಜಾಯಿಸಲು ಹೋದ ಕಾರ್ಮಿಕರ ಸಚಿವ ಸಂತೋಷ ಲಾಡ್ ಅವರಿಗೆ ದಿಕ್ಕುತೋಚದೆ ಎರಾಬಿರಿ ನಕ್ಕು ಬಿಟ್ಟು ಮೌನವಾದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ ಸದ್ದು ಮಾಡುತ್ತಿದ್ದು, ನೋಡುಗರಿಗೆ ಒಂದು ತರಹ ಖುಷಿ ನಿಡುತ್ತಿದೆ.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮಹಿಳೆಯರಿಗೆ ಆಧಾರ ಕಾರ್ಡ್ ಮೂಲಕ ಬಸ್ ಫಾಸ್ ಫ್ರೀ, ಗ್ರಹ ಲಕ್ಷ್ಮೀ ಬಾಗ್ಯ, ಹೀಗೆ ಮಹಿಳೆಯರಿಗೆ ಮಾತ್ರ ಯಾಕೆ ಉಚಿತ ನಾವು ಕೂಡ ಮತ ಚಲಾಯಿಸಿದ್ದೇವೆ ನಮಗೆಕೆ ಏನೂ ಫ್ರೀ ಮಾಡಿಲ್ಲ, ಎಂದು ಸಾಕಷ್ಟು ಗಲಾಟೆಗಳು ಆಗಿಹೋಗಿವೆ.

ಅದರ ಮದ್ಯ ಈಗ ಮದ್ಯ ಪ್ರೀಯರು ಅಧಿವೇಶನದಲ್ಲಿ ಒಂದು ಆಧಾರ ಕಾರ್ಡ್ ಗೆ ಒಂದು ಕ್ವಾಟರ್ ಫ್ರೀ ಕೊಡಿ ಎಂದು ಚಳುವಳಿ ನಡೆಸಿ, ಸಚಿವರ ಬಳಿ ತಮ್ಮ ಅಳಲನ್ನು ತೊಡಿಕೊಂಡ ಘಟನೆ ನಡದಿದೆ, ಈ ವಿಷಯ ಕೆಳಿದ ಸಚ್ಚಿವರು ದಂಗಾಗಿ ಎರಾಬಿರಿ ನಕ್ಕು ಮದ್ಯಪ್ರೀಯರ ಅಹವಾಲನ್ನು ತೆಗೆದುಕೊಂಡು ಸಮಾದಾನಗೊಳಿಸಿದ ವಿಷಯ ಈ ಸಖತ ಸದ್ದು ಮಾಡುತ್ತಿದೆ.

ಒಟ್ಟಾರೆ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಗೋಳು ಒಂದಲ್ಲಾ ಒಂದು ಸಮಸ್ಯೆಗೆ ಸಿಲುಕಿ ಮುಂಬರುವ ದಿನಗಳಲ್ಲಿ ಲೋಕಸಭಾ ಚುನಾವಣೆ ಹೇಗೆ ಎದುರಿಸುತ್ತಾರೊ ಎಂಬುದೆ ಒಂದು ಕುತೂಹಲಕಾರಿಯಾಗಿದೆ.

ವಿಡಿಯೋ ಕೃಪೆ: NB Kannada Channel