ಪೋಲಿಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ: ಮಕ್ಕಳಿಗೆ ಕಾನೂನಾಜ್ಞೆ

0

ಪೋಲಿಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ: ಮಕ್ಕಳಿಗೆ ಕಾನೂನಾಜ್ಞೆ

ಬಾಗಲಕೋಟ: ಜಿಲ್ಲೆಯ ‌ಬಿಳಗಿ ತಾಲೋಕಿನ ಬೀಳಗಿಯ ರುದ್ರಗೌಡ ಪಾಟೀಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಧ್ಯಾರ್ಥಿಗಳಿಗಾಗಿ ಭಾಷಣ, ಸ್ಪರ್ಧೆ ಹಾಗೂ ಅವರ ಮನೋಭಾವ ಬಲವರ್ಧನೆ ಗೋಳಿಸಲು ಹಾಗೂ ಅವರ ಕಲಿಕೆ ಮಟ್ಟವನ್ನು ಹೇಚ್ಚಿಸುವ ನಿಟ್ಟಿನಲ್ಲಿ ಅಗತ್ಯವಾದ ಮಾಹಿತಿಯನ್ನು ತಿಳಿಸಿದರು.

ಕಾನೂನಿನ ಬಗ್ಗೆ ಎಷ್ಟು ತಿಳುವಳಿಕೆ ಹೊಂದಿದ್ದಾರೆ ಮತ್ತು ಕಾನೂನು ಪಾಲನೆಯ ಮಹತ್ವ, ರಸ್ತೆ ಸುರಕ್ಷತೆ, ಸಂಚಾರ ನಿಯಮ ಪಾಲನೆ, ಪೋಕ್ಸೋ ಕಾಯ್ದೆ, ಮಾದಕ ದ್ರವ್ಯದ ದುಷ್ಪರಿಣಾಮಗಳ ಭಾಷಣ ಸ್ಪರ್ಧೆ ಹೀಗೆ ಹತ್ತಾರು ವಿಷಯಗಳ ಕುರಿತು ಮಕ್ಕಳಲ್ಲಿ ಭಾಷಣ ಸ್ಪರ್ದೇ ಆಯೋಜಿಸಿ, ವಿಜೇತ ಪ್ರಥಮ, ದ್ವಿತೀಯ, ತೃತಿಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.

ವಿದ್ಯಾರ್ಥಿಗಳಿಗೆ ಅಪರಾಧ ತಡೆ ಕುರಿತು ಪಿ ಎಸ್ ಐ ಪ್ರೀತಮ್ ನಾಯಕ ಅರಿವು ಮೂಡಿಸಿದರು, ಮತ್ತು ಈ ಸಂದರ್ಭದಲ್ಲಿ ರುದ್ರಗೌಡ್ ಪಾಟೀಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶ್ರೀದೇವಿ ಈ ಪಾಟೀಲ್, ಎ ಎಸ್ ಐ ಬೈಗನಪಲ್ಲಿ, ಎಸ್ ಕೆ ಫಿರ್ಜಾದೆ, ಎನ್ ಆರ್ ಪಾಟೀಲ್ ಹಾಗೂ ಪೊಲೀಸ್ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.