ಜುಗೂಳದಲ್ಲಿ ನಡೆದ ಕೆಎಸ್‌ಎಸ್ ಪ್ರೌಢ ಶಾಲೆ ಸುವರ್ಣ ಮಹೋತ್ಸವ ಪೂರ್ವಿಭಾವಿ ಸಭೆ

0

ಜುಗುಳದಲ್ಲಿ ನಡೆದ ಕೆ ಎಸ್ ಎಸ್ ಪ್ರೌಢ ಶಾಲೆ ಸುವರ್ಣ ಮಹೋತ್ಸವ ಪೂರ್ವಬಾವಿ ಸಬೆ:

ಗುರುವಾಣಿ, ಕಾಗವಾಡ: ತಾಲೂಕಿನ ಜುಗೂಳ ಗ್ರಾಮದ ಕರ್ನಾಟಕ ಶಿಕ್ಷಣ ಸಮಿತಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಮಾರಂಭವು ಬುಧವಾರ ಡಿ. 20 ರಂದು ಜರುಗಲಿದ್ದು, ಈ ಕುರಿತು ಇಂದು ಶನಿವಾರ ಡಿ. 16 ರಂದು ಗ್ರಾಮದ ಶಾಲಾ ಆವರಣದಲ್ಲಿ ಪೂರ್ವಿಭಾವಿ ಸಭೆ ಸಂಪನ್ನಗೊAಡಿತು.

 

ಡಿ. 20 ರಂದು ನಡೆಯಲಿರುವ ಸುವರ್ಣ ಮಹೋತ್ಸವ ಸಮಾರಂಭದ ದಿವ್ಯ ಸಾನಿಧ್ಯವನ್ನು ನಿಡಸೋಶಿ ಮಠದ ಪ.ಪೂ. ಪಂಚಮ ಶಿವಲಿಂಗೇಶ್ವರ ಶ್ರೀಗಳು, ವಿಜಯಪೂರ ಜ್ಞಾನಯೋಗಾಶ್ರಮದ ಪ.ಪೂ. ಬಸವಲಿಂಗ ಶ್ರೀಗಳು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೆಎಲ್‌ಈ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಕಾಗವಾಡ ಶಾಸಕ ರಾಜು ಕಾಗೆ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಅಥಣಿ ಶಾಸಕ ಲಕ್ಷö್ಮಣ ಸವದಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ವಿ.ಪ. ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಶ್ರೀಮಂತ ಪಾಟೀಲ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಬೆಳಗಾವಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ರವೀಂದ್ರ ಪಾಟೀಲ, ಚಿಕ್ಕೋಡಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಲ್ ಹಂಚಾಟೆ, ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಆರ್. ಮುಂಜೆ ಉಪಸ್ಥಿತರಿರುವರು ಎಂದು ಗ್ರಾಮದ ಹಿರಿಯ ಮುಖಂಡರಾದ ಅಣ್ಣಾಸಾಬ ಪಾಟೀಲ ತಿಳಿಸಿದ್ದಾರೆ.

ಈ ಸಮಯದಲ್ಲಿ ಕೆಎಸ್‌ಎಸ್ ಆಡಳಿತ ಮಂಡಳಿಯ ಅಧ್ಯಕ್ಷ ವಿಲಾಸ ಕಡೋಲೆ, ಗ್ರಾ.ಪಂ. ಅಧ್ಯಕ್ಷ ಕಾಕಾಸಾಬ ಪಾಟೀಲ, ನಿವೃತ್ ಶಿಕ್ಷಕರಾದ ಎಸ್.ಎಸ್. ಪಾಟೀಲ, ಮಲ್ಲಪ್ಪಾ ಮರೆಗುದ್ದಿ, ಶಂಕರ ಬೆಳ್ಳಂಕೆ, ಆರ್.ಬಿ. ಪಾಟೀಲ, ಅಣ್ಣಾಸಾಬ ವ್ಹಾಂಟೆ ಸೇರಿದಂತೆ ಗ್ರಾಮದ ಅನೇಕ ಮುಖಂಡರು, ಗ್ರಾ.ಪಂ. ಸದಸ್ಯರು, ಶಿಕ್ಷಕ-ವೃಂದವರು, ಗ್ರಾಮಸ್ಥರು, ಉಪಸ್ಥಿತರಿದ್ದರು.

ಫೋಟೋ ಶಿರ್ಷಿಕೆ: (16 ಕಾಗವಾಡ-1) ಜುಗೂಳದಲ್ಲಿ ನಡೆದ ಕೆಎಸ್‌ಎಸ್ ಪ್ರೌಢ ಶಾಲೆ ಸುವರ್ಣ ಮಹೋತ್ಸವ ಪೂರ್ವಿಭಾವಿ ಸಭೆಯಲ್ಲಿ ಅಣ್ಣಾಸಾಬ ಪಾಟೀಲ, ವಿಲಾಸ ಕಡೋಲೆ, ಎಸ್.ಎಸ್. ಪಾಟೀಲ, ಮಲ್ಲಪ್ಪಾ ಮರೆಗುದ್ದಿ, ಶಂಕರ ಬೆಳ್ಳಂಕೆ, ಆರ್.ಬಿ. ಪಾಟೀಲ, ಅಣ್ಣಾಸಾಬ ವ್ಹಾಂಟೆ ಅವರ ಚಿತ್ರ.