ಬೈಕ್ ತಪ್ಪಿಸಲು ಹೋಗಿ ರಸ್ತೆ ಬದಿಗೆ ಬಿದ್ದ ಬಸ್ ! ಓರ್ವ ಯುವಕ ಗಂಭೀರ । ಅನೇಕರಿಗೆ ಗಾಯ

0
ಬೈಕ್ ತಪ್ಪಿಸಲು ಹೋಗಿ ರಸ್ತೆ ಬದಿಗೆ ಬಿದ್ದ ಬಸ್ ! ಓರ್ವ ಯುವಕ ಗಂಭೀರ । ಅನೇಕರಿಗೆ ಗಾಯ

ಬೈಕ್ ತಪ್ಪಿಸಲು ಹೋಗಿ ರಸ್ತೆ ಬದಿಗೆ ಬಿದ್ದ ಬಸ್ ! ಓರ್ವ ಯುವಕ ಗಂಭೀರ । ಅನೇಕರಿಗೆ ಗಾಯ

ನಿಪ್ಪಾಣಿ: ಎದುರಿಗೆ ಬರುತ್ತಿದ್ದ ದ್ವಿಚಕ್ರ ವಾಹನ ತಪ್ಪಿಸಲು ಹೋಗಿ ಬಸ್‌ವೊಂದು ರಸ್ತೆ ಬದಿಯ ತೆಗ್ಗಿನಲ್ಲಿ ಪಲ್ಟಿ ಹೊಡೆದ ಪರಿಣಾಮ ಓರ್ವ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಅನೇಕರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ನಿಪ್ಪಾಣಿ ತಾಲೂಕಿನ ಗಳತಗಾ ಸಮೀಪ ಸಂಭವಿಸಿದೆ.

ಎದುರಿಗೆ ಬರುತ್ತಿರುವ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಕೆಎಸ್‌ಆರ್‌ಟಿಸಿ ಬಸ್ ರಸ್ತೆಯ ಪಕ್ಕ ಪಲ್ಟಿಯಾಗಿರುವ ಘಟನೆ ಇಂದು ಬೆಳಗ್ಗೆ 11:30 ರ ಸುಮಾರಿಗೆ ಮಮದಾಪುರ-ಗಳತಗಾ ಮಾರ್ಗದಲ್ಲಿ ಭೀಮಾಪೂರವಾಡಿ ಬಳಿ ಸಂಭವಿಸಿದೆ, ಈ ಅಪಘಾತದಲ್ಲಿ ಹತ್ತು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ, ಕೆಎ23ಎಫ್‌0878 ಕ್ರಮಾಂಕದ ಬಸ್ ಇಂಚಲಕರಂಜಿಯಿಂದ ನಿಪ್ಪಾಣಿಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಗೆ ಪಲ್ಟಿ ಹೊಡೆದಿದೆ.

ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಸಂಭವಿಸಿಲ್ಲವಾದರೂ ದ್ವಿಚಕ್ರ ವಾಹನ ಸವಾರನ ತಲೆಗೆ ಪೆಟ್ಟು ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ ಆತನನ್ನು ಕೂಡಲೇ ನಿಪ್ಪಾಣಿಯ ಮಹಾತ್ಮಾ ಗಾಂಧಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೊಲ್ಲಾಪುರಕ್ಕೆ ರವಾನಿಸಲಾಗಿದೆ. ಸದರಿ ಯುವಕ ಮಹಾರಾಷ್ಟ್ರದ ಹುಪರಿ ಪಟ್ಟಣದವನಾಗಿದ್ದು, ಇತನ ಹೆಸರು ಕಿರಣ ಶ್ಯಾಮರಾವ್ ಚವ್ಹಾಣ ವಯಸ್ಸು 35 ಎಂದು ತಿಳಿದು ಬಂದಿದ್ದು, ಸದರಿ ಯುವಕ ಅಕ್ಕೋಳದಿಂದ ಗಳತಗಾ ಕಡೆಗೆ ಪ್ರಯಾಣಿಸುತ್ತಿದ್ದ ಎಂದು ತಿಳಿದು ಬಂದಿದೆ.

ಇನ್ನೂ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ, ನಿಪ್ಪಾಣಿ ಡಿಪೋಗೆ ಸೇರಿದ ಬಸ್ ಇಂಚಲಕರಂಜಿಯಿಂದ ನಿಪ್ಪಾಣಿಗೆ ವಾಪಸಾಗುತ್ತಿದ್ದಾಗ ಬಸ್‌ನಲ್ಲಿ ಜನಸಾಗರದಿಂದ ತುಂಬಿ ತುಳಕುತ್ತಿತು, ಒಟ್ಟು 73 ಜನ ಪ್ರಯಾಣಿಕರು ಈ ಬಸ್‌ನಲ್ಲಿ ಇದ್ದರು, ಗಳತಗಾ-ಭೀಮಾಪುರವಾಡಿ ಬಳಿ ಸ್ಪೀಡ್‌ನಲ್ಲಿ ಬರುವ ಪಲ್ಸರ್ ದ್ವಿಚಕ್ರ ವಾಹನ ಕ್ರಮಾಂಕ ಕೆಎ23ಇಎಲ್3364 ಎದುರಿಗೆ ಬಂದಿದೆ.

ಬಸ್ ಚಾಲಕ ಆರ್.ಎ. ಬಂಡಿ ದ್ವಿಚಕ್ರ ವಾಹನವನ್ನು ರಕ್ಷಿಸಲು ಹೋದ ಕಾರಣ ಬಸ್ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ, ಇನ್ನೂ ಗಳತಗಾ ಗ್ರಾ.ಪಂ ಅಧ್ಯಕ್ಷ ಆಲಗೊಂಡ ಪಾಟೀಲ, ಸಂಜಯ ಕಾಗೆ, ಮಿಥುನ ಪಾಟೀಲ, ರಾಜು ಉಪಾಧ್ಯ, ಬಾಬಾಸಾಹೇಬ ಪಾಟೀಲ, ಭರತ ನಸಲಾಪುರೆ, ಬಸವರಾಜ ಪಾಟೀಲ, ರಾಹುಲ್ ವಾಕಪಾಟೆ, ವಿಜಯ ತೇಲ್ವೇಕರ, ಸಂತೋಷ ಹುಣಸೆ, ರಾಜು ಕಮತನೂರೆ, ರವಿ ಶಾತ್ರಿ, ಗಿರೀಶ್ ಪಾಟೀಲ, ವಿನೋದ ತೇಲವೇಕರ ಮುಂತಾದವರು ಘಟನಾ ಸ್ಥಳಕ್ಕೆ ಆಗಮಿಸಿ, ಪ್ರಯಾಣಿಕರನ್ನು ಹೊರತೆಗೆದ್ದಾರೆ.

ಘಟನೆಯ ಮಾಹಿತಿ ಪಡೆದು ಸದಲಗಾ ಪೊಲೀಸ್ ಠಾಣೆಯ ಪಿಎಸ್‌ಐ ಶಿವುಕುಮಾರ ಬಿರಾದಾರ ಮತ್ತು ಪೋಲಿಸ್ ಸಿಬ್ಬಂದಿ ಸ್ಥಳಕ್ಕೆ ಭೇಟ್ಟಿ ನೀಡಿ, ಪಂಚನಾಮೆ ಮಾಡಿದ್ದಾರೆ. ಸದರಿ ಘಟನೆಯ ಕುರಿತು ಸದಲಗಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಇನ್ನೂ ನಿಪ್ಪಾಣಿ ವಿಭಾಗದ ಡಿಪೋ ಮ್ಯಾನೇಜರ್ ಸಂಗಪ್ಪ ಬಜಣ್ಣನವರ ಹಾಗೂ ರವಿಶಾಸ್ತ್ರಿ ಆಗಮಿಸಿ, ಎಲ್ಲ ಪ್ರಯಾಣಿಕರನ್ನು ಬೇರೆ ಬಸ್‌ಗಳ ಮೂಲಕ ನಿಪ್ಪಾಣಿಗೆ ಕಳುಹಿಸಿದ್ದಾರೆ.