ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪತ್ನಿಗೆ ಸಿಗರೇಟ್ನಿಂದ ಮೈ-ಕೈ ಸುಟ್ಟ ಪತಿ.!

0

ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪತ್ನಿಗೆ ಸಿಗರೇಟ್ನಿಂದ ಮೈ-ಕೈ ಸುಟ್ಟ ಪತಿ.!

ಜನಸ್ಪಂದನ ನ್ಯೂಸ್, ತುಮಕೂರು : ತುಮಕೂರಿನ ಪಂಡಿತನಹಳ್ಳಿ‌ಯಲ್ಲಿ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ಪತ್ನಿಗೆ ಸಿಗರೇಟ್‌ನಿಂದ ಮೈ-ಕೈ ಸುಟ್ಟು, ಕಚ್ಚಿದ ಘಟನೆ ನಡೆದಿದೆ.

ತುಮಕೂರಿನಲ್ಲಿ ಚಾಲಕನಾಗಿರುವ ಗೋವಿಂದರಾಜು ಎಂಬಾತ ಮಹಿಳೆಯನ್ನು 3 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದನು ಎಂದು ತಿಳಿದುಬಂದಿದೆ.

ಇವರಿಬ್ಬರ ದಾಂಪತ್ಯವು ಮೊದಮೊದಲು ಚೆನ್ನಾಗಿಯೇ ಇತ್ತು. ಆದರೆ ಮಕ್ಕಳಾಗಿರಲಿಲ್ಲ. ಈ ಕಾರಣ ಇಟ್ಟುಕೊಂಡು ಗೋವಿಂದರಾಜು ಕುಡಿದು ಬಂದು ಪತ್ನಿಗೆ ದಿನನಿತ್ಯ ಕಿರುಕುಳ ಕೊಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

ಅಷ್ಟೇ ಅಲ್ಲದೇ ಗೋವಿಂದರಾಜು ಕಟ್ಟಿಗೆಯಿಂದ ಹೊಡೆಯುವುದು, ಸಿಗರೇಟ್‌ನಿಂದ ಮೈ-ಕೈ ಸುಡುವುದು, ಕಚ್ಚಿ ಹಲ್ಲೆ ಮಾಡಿದ್ದಾನೆ. ಅಲ್ಲದೇ ಮಕ್ಕಳಾಗಿಲ್ಲ ಎಂದು ನಿಂದಿಸುತ್ತಿದ್ದ ಎನ್ನಲಾಗಿದೆ.

ಪತಿಯ ನಿರಂತರ ಕಿರುಕುಳಕ್ಕೆ ಬೇಸತ್ತ ಪತ್ನಿಯು ಐದಾರು ಸಲ ಹೆಬ್ಬೂರು ಠಾಣೆ ಹಾಗೂ ಮಹಿಳಾ‌ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಮುಂದಾಗಿದ್ದಾರೆ. ಆದರೆ ದೂರು ದಾಖಲಿಸಿಕೊಳ್ಳದೇ ಪೊಲೀಸರು ರಾಜಿ ಮಾಡಿಸಲು ಮುಂದಾಗಿದ್ದಾರೆ ಎಂದು ಮಹಿಳೆಯು ಆರೋಪ ಮಾಡಿದ್ದಾಳೆ.