ಶುಂಠಿ ಚಹಾವನ್ನು ಹೇಗೆ ತಯಾರಿಸುವುದು?

0

ಶುಂಠಿ ಚಹಾವನ್ನು ಹೇಗೆ ತಯಾರಿಸುವುದು?

ಶುಂಠಿ ಟೀ ಸಿದ್ಧ ಮಾಡಲು ಬೇಕಾಗಿರುವ ಸಾಮಗ್ರಿಗಳು:

  • ಒಂದು ಅಥವಾ ಎರಡು ಕಪ್ಪು ನೀರು.
  • ತೆಳ್ಳಗೆ ಹೆಚ್ಚಿದ ಶುಂಠಿಯ ಸಣ್ಣ ಚೂರುಗಳು.
  • ಸ್ವಲ್ಪ ನಿಂಬೆ ಹಣ್ಣಿನ ರಸ ಅಥವಾ ಒಂದು ಚಮಚ ಜೇನು ತುಪ್ಪ.

ಶುಂಠಿ ಚಹಾ ತಯಾರು ಮಾಡುವ ವಿಧಾನ:

*ಮೊದಲಿಗೆ ಸ್ಟೌವ್ ಮೇಲೆ ನೀರು ಕಾಯಲು ಇಡಿ.

*ನೀರು ಚೆನ್ನಾಗಿ ಕುದಿ ಬಂದ ಮೇಲೆ ಅದಕ್ಕೆ ನೀವು ಮೊದಲೇ ಕತ್ತರಿಸಿ ಇಟ್ಟುಕೊಂಡ ಶುಂಠಿ ಚೂರುಗಳನ್ನು ಹಾಕಿ ಸುಮಾರು 20 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ, ಇದರಿಂದ ಶುಂಠಿಯಲ್ಲಿರುವ ರಸ ನೀರಿಗೆ ಬಿಟ್ಟುಕೊಳ್ಳುತ್ತದೆ.

*ಈಗ ಸ್ಟವ್ ಆಫ್ ಮಾಡಿ ಶುಂಠಿ ರಸದ ನೀರನ್ನು ನೀವು ಕುಡಿಯುವ ಮಟ್ಟಿಗೆ ಅಂದರೆ ಉಗುರು ಬೆಚ್ಚನೆಯ ರೀತಿ ಆರಲು ಬಿಡಿ. *ಇದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸ ಅಥವಾ ಜೇನು ತುಪ್ಪವನ್ನು ಹಾಕಿ. *ಇದರ ರುಚಿ ಇನ್ನೂ ಸ್ವಲ್ಪ ಹೆಚ್ಚಿಸಬೇಕೆಂದರೆ ನೀವು ಇದಕ್ಕೆ ಸ್ವಲ್ಪ ಪುದೀನ ಎಲೆಗಳನ್ನು ಬೇಕಾದರೂ ಸೇರಿಸಬಹುದು.

 

Amazon offers : Click here.

Guruvani Digital Media