ರಾಜಭವನದ ಹೊರಗೆ ಪೆಟ್ರೋಲ್ ಬಾಂಬ್ ಎಸೆತ : ಓರ್ವನ ಬಂಧನ.!

0

ತಮಿಳುನಾಡಿನ ರಾಜಧಾನಿ ಚೆನ್ನೈನ ರಾಜಭವನದ ಹೊರಗೆ ಪೆಟ್ರೋಲ್ ಬಾಂಬ್ ಎಸೆದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಬಂಧಿತ ವ್ಯಕ್ತಿಯನ್ನು ವಿನೋದ ಎಂದು ಗುರುತಿಸಲಾಗಿದೆ. ನೀಟ್ ಮಸೂದೆಗೆ ರಾಜ್ಯಪಾಲ ಟಿ.ಎನ್.ರವಿ ಅವರು ಒಪ್ಪಿಗೆ ನೀಡದ ಕಾರಣ ಪೆಟ್ರೋಲ್ ಬಾಂಬ್ ಎಸೆದಿರುವುದಾಗಿ ಆರೋಪಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಮೂರು ದಿನಗಳ ಹಿಂದಷ್ಟೆ ಈತ ಜೈಲಿನಿಂದ ಬಿಡುಗಡೆಯಾಗಿದ್ದ. ತಮಿಳುನಾಡು ಬಿಜೆಪಿ ಕಚೇರಿ ಸೇರಿದಂತೆ ಕನಿಷ್ಠ ನಾಲ್ಕು ಬಾರಿ ಪೆಟ್ರೋಲ್ ಬಾಂಬ್ ಎಸೆದ ಇತಿಹಾಸ ಹೊಂದಿದ್ದಾನೆ. 

ಈ ಘಟನೆಯಲ್ಲಿ ಕೇವಲ ಒಂದು ಪೆಟ್ರೋಲ್ ಬಾಂಬ್ ಬಳಸಲಾಗಿದ್ದು, ಆರೋಪಿಗಳು ನಿರೀಕ್ಷಿಸಿದ ರೀತಿಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.