ಬ್ಯಾಗ್‌ನಲ್ಲಿ ಮಗು ಕದ್ದೊಯ್ದ ಕೇಸ್ : ಕೊನೆಗೂ ನವಜಾತ ಶಿಶು ಪತ್ತೆ, ಮಹಿಳೆ ಅರೆಸ್ಟ್ .!

0

 ಕೋಲಾರ ಎಸ್‌ಎನ್‌ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್‌ನಿಂದ ಕದ್ದೊಯ್ದಿದ್ದ ನವಜಾತ ಶಿಶುವನ್ನು ಕೋಲಾರ (Kolar) ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ನಿನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ವಾರ್ಡ್‌ನಲ್ಲಿ ತಾಯಿ ನಿದ್ದೆಗೆ ಜಾರಿದ ವೇಳೆ ಮೂವರು ಅಪರಿಚಿತ ಮಹಿಳೆಯರು ಹೊಂಚು ಹಾಕಿ ಮಗುವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. 

ಮಗುವನ್ನು ಕಾಲೇಜು ಬ್ಯಾಗಿನಲ್ಲಿ ಬಚ್ಚಿಟ್ಟುಕೊಂಡ ಮೂವರು ಮಹಿಳೆಯರು ಯಾರಿಗೂ ಗೊತ್ತಾಗದಂತೆ ಎಸ್ಕೇಪ್ ಆಗಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದು ಆಟೊ ಏರುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ವಿಷಯ ತಿಳಿದು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕೋಲಾರ ಮಹಿಳಾ‌ ಠಾಣೆ ಪೊಲೀಸರು ತಮಿಳುನಾಡಿನ ಬೇರಿಕೆ ಬಳಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಉಳಿದ‌ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಸದ್ಯ ನಾಲ್ಕು ದಿನದ ಮಗು ತಾಯಿ ಮಡಿಲು ಸೇರಿದೆ. ಮಗುವನ್ನು ಕಂಡು ತಾಯಿಯ ಸಂತೋಷ ಹೇಳತೀರದು. ತಾಯಿ ಮಗುವನ್ನು ಬಿಗಿದಪ್ಪಿ ಖುಷಿಪಟ್ಟಿದ್ದಾರೆ. 

ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.