ನಿಪ್ಪಾಣಿಗೆ ಶಾಶ್ವತ ಕುಡಿಯುವ ನೀರು ಯೋಜನೆಗೆ ಸರ್ಕಾರದ ಸಕಾರಾತ್ಮಕ ಸ್ಪಂದನೆ

0

ನಿಪ್ಪಾಣಿಗೆ ಶಾಶ್ವತ ಕುಡಿಯುವ ನೀರು ಯೋಜನೆಗೆ ಸರ್ಕಾರದ ಸಕಾರಾತ್ಮಕ ಸ್ಪಂದನೆ;

ಯತ್ನಾಳ ಬಳಿ ಚೆಕ್ ಡ್ಯಾಂ ನಿರ್ಮಿಸಲು ಸ್ಥಳ ಪರೀಶಿಲನೆ..!!

ನಿಪ್ಪಾಣಿ ನಗರಕ್ಕೆ ಶಾಶ್ವತವಾಗಿ ನೀರಿನ ಸಮಸ್ಯೆ ಪರಿಹರಿಸುವ ಯೋಜನೆಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ಯತ್ನಾಳ ಬಳಿ ಚಿಕ್ಕ ಡ್ಯಾಂ ನಿರ್ಮಿಸಲು ಸ್ಥಳ ಪರಿಶೀಲನೆ ಮಾಡಿದ್ದು, ಈ ಯೋಜನೆ ಕಾರ್ಯರೂಪಕ್ಕೆ ಬಂದರೇ ನಗರದ ಶಾಶ್ವತ ನೀರಿನ ಸಮಸ್ಯೆಗೆ ಇತಿಶ್ರೀ ಹಾಡಿದಂತಾಗಲಿದೆ.

ನಿಪ್ಪಾಣಿ ನಗರದ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಹೊಸ ಚಿಕ್ಕ ಜಲಾಶಯ ನಿರ್ಮಾಣಕ್ಕಾಗಿ ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ನೇತೃತ್ವದಲ್ಲಿ ಮಾಜಿ ನಗರ ಸಭಾಧ್ಯಕ್ಷ, ವಿಲಾಸ ಗಾಡಿವಡ್ಡರ ಸೇರಿದಂತೆ ನಗರದ ಅನೇಕ ಮುಖಂಡರಗಳ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮುಖಾಂತರ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು ಅವರನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿ ಭೇಟಿ ಮಾಡಿ, ಮನವರಿಕೆ ಮಾಡಿಕೊಟ್ಟಿದ್ದಾರೆ.

ಸಕಾರಾತ್ಮಕ ಸ್ಪಂದನೆಯ ನಂತರ 24 ಗಂಟೆಯೊಳಗೆ ಚೆಕ್ ಡ್ಯಾಂ ನಿರ್ಮಾಣದ ಸ್ಥಳವನ್ನು ಸರ್ವೆ ಮಾಡುವಂತೆ ಆದೇಶ ಲಭ್ಯವಾಗಿದ್ದು, ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀಕಾಂತ ಮಾಕಾನೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸಂಬಂದಪಟ್ಟ ಅಗತ್ಯ ಕಾರ್ಯ ವಿಧಾನಗಳನ್ನು ಪೂರ್ಣಗೊಳಿಸಿ ಶೀಘ್ರದಲ್ಲಿ ಸರ್ವೆ ಕಾರ್ಯ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ, ಈ ಕುರಿತು ಮಾಜಿ ನಗರಸಭೆ ಅಧ್ಯಕ್ಷ ವಿಲಾಸ ಗಾಡಿವಡ್ಡರ ಮಾಹಿತಿ ನೀಡಿ, ನಗರದ ನೀರಿನ ಸಮಸ್ಯೆಯನ್ನು ಶಾಶ್ವತ ಪರಿಹಾರಕ್ಕಾಗಿ 175 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದಕ್ಕೆ ಸರ್ಕಾರದಿಂದ ಈ ಹೊಸ ಚೆಕ್ ಡ್ಯಾಂಕ ಸ್ಥಳ ಸಮೀಕ್ಷೆಗೆ ಆದೇಶ ನೀಡಿದ್ದು, ಈ ಅಧಿಕಾರಿಗಳು ಸ್ಥಳ ಪರೀಶಿಲನೆ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಲಸಂಪನ್ಮೂಲ ಇಲಾಖೆಯ ಅಭಿಯಂತರರಾದ ಎ.ಎಸ್. ಪುಜಾರಿ, ನರಸೇವಕರಾದ ರವೀಂದ್ರ ಶಿಂಧೆ, ಶೌಕತ ಮನೇರ, ದತ್ತಾತ್ರಯ ನಾಯಕ, ಡಾ. ಜಸರಾಜ್ ಗಿರೆ, ಸಂಜಯ ಪಾವಲೆ, ಶೇರು ಬಡೇಘರ, ದಿಲೀಪ ಪಠಾಡೆ, ಅನೀಸ್ ಮುಲ್ಲಾ, ಸುನೀಲ ಶೇಲಾರ, ದೀಪಕ ಸಾವಂತ, ವಿಶಾಲ ಗಿರಿ, ಪುರಸಭೆ ಸಹಾಯಕ ಇಂಜಿನಿಯರ ಕೃಷ್ಣಾ ಪೋಳ, ಸಾಗರ ಬಸ್ತೆ, ವಿಶಾಲ ಲಠವಾಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

[xyz-ihs snippet=”Amazon-Ads”]