ಪಕ್ಷ ತೊರೆದವರನ್ನು ಮತ್ತೆ ಸೇರ್ಪಡೆಗೆ ಮುನ್ನ ವಿಚಾರಿಸಿ: ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ರಾಜೇಂದ್ರ ಪವಾರ ಹೇಳಿಕೆ !

0

ಪಕ್ಷ ತೊರೆದವರನ್ನು ಮತ್ತೆ ಸೇರ್ಪಡೆಗೆ ಮುನ್ನ ವಿಚಾರಿಸಿ: ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ರಾಜೇಂದ್ರ ಪವಾರ ಹೇಳಿಕೆ !

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಲ್ಲಿ ಕಳೆದ ವಿಧಾನ ಸಭಾ ಚುನಾವಣೆ ವೇಳೆ ನಿಪ್ಪಾಣಿ ಕ್ಷೇತ್ರದಲ್ಲಿ ಧನಶಕ್ತಿಗೆ ಮರುಳಾಗಿ ಕಾಂಗ್ರೆಸ ಪಕ್ಷ ತೊರೆದಿದ್ದ ಹಲವು ಕಾರ್ಯಕರ್ತರು ರಾಜ್ಯದಲ್ಲಿ ಕಾಂಗ್ರೆಸ ಪಕ್ಷ ಅಧಿಕಾರಕ್ಕೆ ಬರುತ್ತಲೆ ಮತ್ತೆ  ಪಕ್ಷಕೆ ಮರಳಲು ಸಿದ್ದರಾಗಿದ್ದಾರೆ.

ಇಂಥವರನ್ನು ಸೇರ್ಪಡೆ ಮಾಡುವದಕ್ಕಿಂತ ಮುನ್ನ ಪಕ್ಷದ ನಾಯಕರು ವಿಚಾರಮಾಡಿ ಸಭೆ ಮಾಡಬೇಕು ಎಂದರು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜನಶಕ್ತಿ ವಿರೋದ ಧನಶಕ್ತಿ ಎಂಬ ಹೋರಾಟ ನೆಡೆದಿದ್ದು ಆ ವೇಳೆ ಕೆಲ ಕಾಂಗ್ರೆಸ ಪಕ್ಷದ ಮಾಜಿ ಶಾಸಕರು ಕಾಕಾಸಾಹೇಬ ಪಾಟೀಲ ಅವರನ್ನು ಬಿಟ್ಟು ಧನಶಕ್ತಿಗೆ ಬೆಂಬಲಿಸಿದ್ದು, ಆ ವೇಳೆ ಕೇವಲ ನಿಷ್ಟಾವಂತ ಕಾಂಗ್ರೆಸ ಕಾರ್ಯಕರ್ತರು ಮಾತ್ರ ಉಳಿದಿದ್ದರು ಮತ್ತು ಎಲ್ಲಾ ನಿಷ್ಠಾವಂತ ಕಾರ್ಯಕರ್ತರು ಸ್ವಯಂ ಹಣ ಖರ್ಚು ಮಾಡಿ ಕಾಕಾಸಾಹೇಬ ಪಾಟೀಲ ಅವರನ್ನು ತರಲು ಪ್ರಮಾಣಿಕ ಪ್ರಯತ್ನ ಮಾಡಿದ್ದರು.

ಆದರೆ ಇಂತ ಪಕ್ಷ ಬಿಟ್ಟು ಬೇರೆ ಬೇರೆ ಪಕ್ಷಕೆ ಪ್ರಚಾರ ಮಾಡುವವರನ್ನು ಪುನಹ ಪಕ್ಷದಲ್ಲಿ ಕರೆದುಕೊಳ್ಳುವುದಕ್ಕಿಂತ ಮುನ್ನ ವಿಚಾರ ಮಾಡಬೇಕು ಮತ್ತು ಕಾರ್ಯಕರ್ತರ ಸಭೆ ಮಾಡಿ ಈ ವಿಷಯ ಕುರಿತು ಚರ್ಚಿಸಬೇಕು ಎಂದು ರಾಜೇಂದ್ರ ಪವಾರಯವರು ಸುದ್ಧಿ ಘೋಷ್ಟಿಯಲ್ಲಿ ಹೇಳಿದರು.

ಇದೆ ಸಂದರ್ಭದಲ್ಲಿ

ದಗಡು ವಡ್ಡರ

ಮಹೇಶ್ ಮೀಟಕೆ,

ಶಿವಾನಂದ ಬುರ್ಗೆ,

ಅವಿನಾಶ ಮಡ್ದೆ,

ಗಣೇಶ ಕಾಂಬಳ್ಳೆ,

ಉಪಸ್ಥಿತರಿದ್ದರು.