ಕೋವ್ಹಿಡ್ ಎದುರಿಸಲು ತಾಲೂಕಾಡಳಿತ ಸಜ್ಜು

0

ಕೋವ್ಹಿಡ್ ಎದುರಿಸಲು ತಾಲೂಕಾಡಳಿತ ಸಜ್ಜು

ಕಾಗವಾಡ: ತಹಶೀಲ್ದಾರ ರಾಜೇಶ ಬುರ್ಲಿ
ಕಾಗವಾಡದಲ್ಲಿ ಕೋವ್ಹಿಡ್ ಮುನ್ನೆಚ್ಚರಿಕೆ ಕುರಿತು ಅಧಿಕಾರಿಗಳ ವೈದ್ಯಾಧಿಕಾರಿಗಳ ಸಭೆ..!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವ್ಹಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮುಂಜಾಗ್ರತೆ ಕ್ರಮವಾಗಿ ರಾಜ್ಯ ಸರ್ಕಾರ ಕೋವ್ಹಿಡ್ ಕುರಿತು ಹೊರಡಿಸಿರುವ ಆದೇಶದನುಸಾರ ಕಾಗವಾಡ ತಾಲೂಕಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ತಹಶೀಲ್ದಾರ ರಾಜೇಶ ಬುರ್ಲಿ ತಿಳಿಸಿದರು.

ಅವರು ಶುಕ್ರವಾರ ದಿ. 22 ರಂದು ಕಾಗವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರೆದಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈಗಾಗಲೇ ಆರೋಗ್ಯ ಕೇಂದ್ರದಲ್ಲಿ 30 ಬೆಡ್‌ಗಳ ಕೋವ್ಹಿಡ್ ವಿಭಾಗ ಪ್ರಾರಂಭಿಸಿದ್ದು, 11 ಆಕ್ಷಿಜನ್ ಬೆಡ್‌ಗಳನ್ನು ಪ್ರಾರಂಭಿಸಲಾಗಿದೆ. ಇದಲ್ಲದೇ ಪಿಪಿಇ ಕಿಟ್, ಔಷಧಗಳನ್ನು ದಾಸ್ತಾನು ಮಾಡಲಾಗಿದೆ. ತಾಲೂಕಿನ ಪ್ರತಿ ಗ್ರಾಮಗಳಲ್ಲಿಯೂ ಕೋವ್ಹಿಡ್ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಕೂಡಲೇ ಆಯಾ ಗ್ರಾಮ ಪಂಚಾಯತಿಗಳ ಮುಖಾಂತರ ಸಮುದಾಯ ಆರೋಗ್ಯ ಕೇಂದ್ರಗಳ ಮುಖಾಂತರ ಮಾಡಲಾಗುವುದು. ಸಾರ್ವಜನಿಕರು ಭಯ ಪಡೆದೇ ಕೋವ್ಹಿಡ್ ನಿಯಮಗಳನ್ನು ಪಾಲಿಸಬೇಕು.

ಚಿಕ್ಕ ಮಕ್ಕಳು, ಗರ್ಭಿಣಿಯರು, ಬಾಣಂತಿಯರು, 60 ವರ್ಷ ಮೇಲ್ಪಟ್ಟ ಹಿರಿಯರು ಮತ್ತು ದೊಡ್ಡ ಕಾಯಿಲೆಗಳಿಂದ ಬಳಲುತ್ತಿರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮತ್ತು ಎಲ್ಲ ಸಾರ್ವಜನಿಕರು ಹೊರಗೆ ಹೋಗುವಾಗ ಅಥವಾ ಅನಿವಾರ್ಯವಾಗಿ ಗುಂಪು ಸೇರುವಾಗ ಮಾಸ್ಕ್ ಧರಿಸಬೇಕು. ಅಲ್ಲದೇ ಹೊರ ರಾಜ್ಯಗಳಿಗೆ ತೆರಳುವ ಪ್ರತಿಯೊಬ್ಬರು ಮಾಸ್ಕ್ ಧರಿಸಿ ಪ್ರಯಾಣಿಸಬೇಕು. ಕೆಮ್ಮು, ನೆಗಡಿ, ಜ್ವರ ಇಂತಹ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆದು, ಉಪಚಾರ ಮಾಡಿಕೊಳ್ಳಬೇಕು. ಪ್ರತಿಯೊಬ್ಬರ ಆರೋಗ್ಯ ರಕ್ಷಣ ನಮ್ಮೆಲ್ಲರ ಹೊಣೆ ಆದ್ದರಿಂದ ಎಲ್ಲರು ಮುಂಜಾಗೃತ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.

ಈ ಸಮಯದಲ್ಲಿ ಸಿಡಿಪಿಓ ಸಂಜೀವಕುಮಾರ ಸದಲಗೆ, ಬಿಇಓ ಎಮ್.ಆರ್. ಮುಂಜೆ, ತಾ.ಪಂ. ಇಓ ಪ್ರವೀಣ ಪಾಟೀಲ, ಡಾ. ಪುಷ್ಪಲತಾ ಸುಣ್ಣದಕಲ್ಲ, ಡಾ. ಎಸ್.ಎಸ್. ಕೋಳಿ, ಡಾ. ಸೌಮ್ಯಾ ಪಾಟೀಲ, ಡಾ. ರಾಘವೇಂದ್ರ ಲೋಕುರ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಸೂರಜ ಕುಂಬಾರ, ಜಾವಿದ್ ಮುಂಜಾವರ್, ರವಿ ಸೋಲಾm ಸೇರಿದಂತೆ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.