Home Blog

ಕಾಂಗ್ರೆಸ್ ಸರ್ಕಾರದ ವಿರುದ್ಧ ತಾರತಮ್ಯ ನೀತಿ ವಿರೋಧಿಸಿ, ಬಿಜೆಪಿಯಿಂದ ಪ್ರತಿಭಟನೆ..!

ಕಾಂಗ್ರೆಸ್ ಸರ್ಕಾರದ ವಿರುದ್ಧ ತಾರತಮ್ಯ ನೀತಿ ವಿರೋಧಿಸಿ, ಬಿಜೆಪಿಯಿಂದ ಪ್ರತಿಭಟನೆ..!

ಕಾಗವಾಡ, ಅಥಣಿ ಮತಕ್ಷೇತ್ರದ ಜನಪ್ರತಿಧಿಗಳು ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸದೇ, ದ್ವೇಷ, ದಬ್ಬಾಳಿಕೆ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಮಂಜೂರು ಮಾಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಅಡತಡೆ ಮಾಡುತ್ತಿದ್ದಾರೆಂದು ಮಾಜಿ ಸಚಿವ ಹಾಲಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಆರೋಪಿಸಿದ್ದಾರೆ.

ಅವರು ರವಿವಾರ ಜ. 21 ರಂದು ಕಾಗವಾಡ ಪಟ್ಟಣದ ಚೆನ್ನಮ್ಮಾ ವೃತ್‌ದಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ ನೇತೃತ್ವದಲ್ಲಿ ಕಾಗವಾಡ, ಅಥಣಿ ಜನಪ್ರತಿನಿಧಿಗಳ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ. ಅಭಿವೃದ್ಧಿ ಕಾರ್ಯದಲ್ಲಿ ತಾರತಮ್ಯ ಮಾಡುತ್ತಿದ್ದು, ಇದು ನಿಲ್ಲಬೇಕು. ಇಲ್ಲವಾದರೇ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ಕ್ಷೇತ್ರದಲ್ಲಿಯ ಗ್ರಾಮ ಪಂಚಾಯತಿಗಳಿಗೆ ಸರ್ಕಾರದಿಂದ ಮಂಜೂರಾದ ಮನೆ ಹಂಚಿಕೆಯಲ್ಲಿ ಸ್ಥಳೀಯ ಶಾಸಕರು ತಾರತಮ್ಯ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ದಬ್ಬಾಳಿಕೆ ನಡೆಸಲಾಗುತ್ತಿದೆ. ನಮ್ಮ ಅವಧಿಯಲ್ಲಿ ಮಂಜೂರಾದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ತಡೆ ಹಿಡಯಲಾಗಿದೆ. ಬಸವೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ಕುಂಟುತ್ತಾ ಸಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಪೋಲಿಸ್‌ರ ಮತ್ತು ಕಾರ್ಯಕರ್ತರ ಮಧ್ಯೆ ಕೆಲಹೊತ್ತು ಮಾತಿನ ಚಕಮಕಿ ಉಂಟಾಯಿತು. ಇದೇ ವೇಳೆ ಬಿಜೆಪಿ ಕಾರ್ಯಕರ್ತರ ಪರವಾಗಿ ಅನ್ಯಾಯದ ವಿರುದ್ಧ ಪೋಲಿಸ್ ಇಲಾಖೆ ಯಾರ ಒತ್ತಡಕ್ಕೂ ಒಳಗಾಗದೇ ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮನವಿ ಸಲ್ಲಿಸಲಾಯಿತು.

ಈ ಸಮಯದಲ್ಲಿ ಮಾಜಿ ಶಾಸಕ ಮಹೇಶ ಕುಮಟಳ್ಳಿ, ಮುಖಂಡರಾದ ಶ್ರೀನಿವಾಸ ಪಾಟೀಲ, ದಾದಾ ಪಾಟೀಲ, ಆರ್.ಎಂ. ಪಾಟೀಲ, ಮಹಾದೇವ ಕೋರೆ, ರಾಜ ಸೊಡ್ಡಿ, ಅಭಯ ಅಕಿವಾಟೆ, ಶಿವಾನಂದ ಪಾಟೀಲ, ಅರುಣ ಗಣೇಶವಾಡಿ, ರಾಮಗೌಡಾ ಪಾಟೀಲ, ಮನೋಜ ಕುಸನಾಳೆ, ಸುನೀಲ ಶಿಂಧೆ, ಕಾಗವಾಡ ಬ್ಲಾಕ್ ಬಿಜೆಪಿ ಅಧ್ಯಕ್ಷ ತಮ್ಮಣ್ಣಾ ಪಾರಶೆಟ್ಟಿ, ಉಪಾಧ್ಯಕ್ಷ ರಾಕೇಶ ಪಾಟೀಲ, ಸುಜಯ ಫರಾಕಟ್ಟೆ, ಅರುಣ ಜೋಶಿ, ನೇತಾಜಿ ಕಾಟೆ ಸೇರಿದಂತೆ ಅನೇಕ ಮುಖಂಡರು, ಸಾವಿರಾರು ಸಂಖ್ಯೆಯ ಬಿಜೆಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪೋಟೊ ಶಿರ್ಷಿಕೆ: 21 (ಕಾಗವಾಡ -1) ಕಾಗವಾಡ ಪಟ್ಟಣದಲ್ಲಿ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡುತ್ತಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ, ಮಹೇಶ ಕುಮಟಳ್ಳಿ ಹಾಗೂ ಇತರರ ಚಿತ್ರ.

ಬೈಕ್ ತಪ್ಪಿಸಲು ಹೋಗಿ ರಸ್ತೆ ಬದಿಗೆ ಬಿದ್ದ ಬಸ್ ! ಓರ್ವ ಯುವಕ ಗಂಭೀರ । ಅನೇಕರಿಗೆ ಗಾಯ

ಬೈಕ್ ತಪ್ಪಿಸಲು ಹೋಗಿ ರಸ್ತೆ ಬದಿಗೆ ಬಿದ್ದ ಬಸ್ ! ಓರ್ವ ಯುವಕ ಗಂಭೀರ । ಅನೇಕರಿಗೆ ಗಾಯ

ನಿಪ್ಪಾಣಿ: ಎದುರಿಗೆ ಬರುತ್ತಿದ್ದ ದ್ವಿಚಕ್ರ ವಾಹನ ತಪ್ಪಿಸಲು ಹೋಗಿ ಬಸ್‌ವೊಂದು ರಸ್ತೆ ಬದಿಯ ತೆಗ್ಗಿನಲ್ಲಿ ಪಲ್ಟಿ ಹೊಡೆದ ಪರಿಣಾಮ ಓರ್ವ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಅನೇಕರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ನಿಪ್ಪಾಣಿ ತಾಲೂಕಿನ ಗಳತಗಾ ಸಮೀಪ ಸಂಭವಿಸಿದೆ.

ಎದುರಿಗೆ ಬರುತ್ತಿರುವ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಕೆಎಸ್‌ಆರ್‌ಟಿಸಿ ಬಸ್ ರಸ್ತೆಯ ಪಕ್ಕ ಪಲ್ಟಿಯಾಗಿರುವ ಘಟನೆ ಇಂದು ಬೆಳಗ್ಗೆ 11:30 ರ ಸುಮಾರಿಗೆ ಮಮದಾಪುರ-ಗಳತಗಾ ಮಾರ್ಗದಲ್ಲಿ ಭೀಮಾಪೂರವಾಡಿ ಬಳಿ ಸಂಭವಿಸಿದೆ, ಈ ಅಪಘಾತದಲ್ಲಿ ಹತ್ತು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ, ಕೆಎ23ಎಫ್‌0878 ಕ್ರಮಾಂಕದ ಬಸ್ ಇಂಚಲಕರಂಜಿಯಿಂದ ನಿಪ್ಪಾಣಿಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಗೆ ಪಲ್ಟಿ ಹೊಡೆದಿದೆ.

ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಸಂಭವಿಸಿಲ್ಲವಾದರೂ ದ್ವಿಚಕ್ರ ವಾಹನ ಸವಾರನ ತಲೆಗೆ ಪೆಟ್ಟು ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ ಆತನನ್ನು ಕೂಡಲೇ ನಿಪ್ಪಾಣಿಯ ಮಹಾತ್ಮಾ ಗಾಂಧಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೊಲ್ಲಾಪುರಕ್ಕೆ ರವಾನಿಸಲಾಗಿದೆ. ಸದರಿ ಯುವಕ ಮಹಾರಾಷ್ಟ್ರದ ಹುಪರಿ ಪಟ್ಟಣದವನಾಗಿದ್ದು, ಇತನ ಹೆಸರು ಕಿರಣ ಶ್ಯಾಮರಾವ್ ಚವ್ಹಾಣ ವಯಸ್ಸು 35 ಎಂದು ತಿಳಿದು ಬಂದಿದ್ದು, ಸದರಿ ಯುವಕ ಅಕ್ಕೋಳದಿಂದ ಗಳತಗಾ ಕಡೆಗೆ ಪ್ರಯಾಣಿಸುತ್ತಿದ್ದ ಎಂದು ತಿಳಿದು ಬಂದಿದೆ.

ಇನ್ನೂ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ, ನಿಪ್ಪಾಣಿ ಡಿಪೋಗೆ ಸೇರಿದ ಬಸ್ ಇಂಚಲಕರಂಜಿಯಿಂದ ನಿಪ್ಪಾಣಿಗೆ ವಾಪಸಾಗುತ್ತಿದ್ದಾಗ ಬಸ್‌ನಲ್ಲಿ ಜನಸಾಗರದಿಂದ ತುಂಬಿ ತುಳಕುತ್ತಿತು, ಒಟ್ಟು 73 ಜನ ಪ್ರಯಾಣಿಕರು ಈ ಬಸ್‌ನಲ್ಲಿ ಇದ್ದರು, ಗಳತಗಾ-ಭೀಮಾಪುರವಾಡಿ ಬಳಿ ಸ್ಪೀಡ್‌ನಲ್ಲಿ ಬರುವ ಪಲ್ಸರ್ ದ್ವಿಚಕ್ರ ವಾಹನ ಕ್ರಮಾಂಕ ಕೆಎ23ಇಎಲ್3364 ಎದುರಿಗೆ ಬಂದಿದೆ.

ಬಸ್ ಚಾಲಕ ಆರ್.ಎ. ಬಂಡಿ ದ್ವಿಚಕ್ರ ವಾಹನವನ್ನು ರಕ್ಷಿಸಲು ಹೋದ ಕಾರಣ ಬಸ್ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ, ಇನ್ನೂ ಗಳತಗಾ ಗ್ರಾ.ಪಂ ಅಧ್ಯಕ್ಷ ಆಲಗೊಂಡ ಪಾಟೀಲ, ಸಂಜಯ ಕಾಗೆ, ಮಿಥುನ ಪಾಟೀಲ, ರಾಜು ಉಪಾಧ್ಯ, ಬಾಬಾಸಾಹೇಬ ಪಾಟೀಲ, ಭರತ ನಸಲಾಪುರೆ, ಬಸವರಾಜ ಪಾಟೀಲ, ರಾಹುಲ್ ವಾಕಪಾಟೆ, ವಿಜಯ ತೇಲ್ವೇಕರ, ಸಂತೋಷ ಹುಣಸೆ, ರಾಜು ಕಮತನೂರೆ, ರವಿ ಶಾತ್ರಿ, ಗಿರೀಶ್ ಪಾಟೀಲ, ವಿನೋದ ತೇಲವೇಕರ ಮುಂತಾದವರು ಘಟನಾ ಸ್ಥಳಕ್ಕೆ ಆಗಮಿಸಿ, ಪ್ರಯಾಣಿಕರನ್ನು ಹೊರತೆಗೆದ್ದಾರೆ.

ಘಟನೆಯ ಮಾಹಿತಿ ಪಡೆದು ಸದಲಗಾ ಪೊಲೀಸ್ ಠಾಣೆಯ ಪಿಎಸ್‌ಐ ಶಿವುಕುಮಾರ ಬಿರಾದಾರ ಮತ್ತು ಪೋಲಿಸ್ ಸಿಬ್ಬಂದಿ ಸ್ಥಳಕ್ಕೆ ಭೇಟ್ಟಿ ನೀಡಿ, ಪಂಚನಾಮೆ ಮಾಡಿದ್ದಾರೆ. ಸದರಿ ಘಟನೆಯ ಕುರಿತು ಸದಲಗಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಇನ್ನೂ ನಿಪ್ಪಾಣಿ ವಿಭಾಗದ ಡಿಪೋ ಮ್ಯಾನೇಜರ್ ಸಂಗಪ್ಪ ಬಜಣ್ಣನವರ ಹಾಗೂ ರವಿಶಾಸ್ತ್ರಿ ಆಗಮಿಸಿ, ಎಲ್ಲ ಪ್ರಯಾಣಿಕರನ್ನು ಬೇರೆ ಬಸ್‌ಗಳ ಮೂಲಕ ನಿಪ್ಪಾಣಿಗೆ ಕಳುಹಿಸಿದ್ದಾರೆ.

ಕೋವ್ಹಿಡ್ ಎದುರಿಸಲು ತಾಲೂಕಾಡಳಿತ ಸಜ್ಜು

ಕೋವ್ಹಿಡ್ ಎದುರಿಸಲು ತಾಲೂಕಾಡಳಿತ ಸಜ್ಜು

ಕಾಗವಾಡ: ತಹಶೀಲ್ದಾರ ರಾಜೇಶ ಬುರ್ಲಿ
ಕಾಗವಾಡದಲ್ಲಿ ಕೋವ್ಹಿಡ್ ಮುನ್ನೆಚ್ಚರಿಕೆ ಕುರಿತು ಅಧಿಕಾರಿಗಳ ವೈದ್ಯಾಧಿಕಾರಿಗಳ ಸಭೆ..!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವ್ಹಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮುಂಜಾಗ್ರತೆ ಕ್ರಮವಾಗಿ ರಾಜ್ಯ ಸರ್ಕಾರ ಕೋವ್ಹಿಡ್ ಕುರಿತು ಹೊರಡಿಸಿರುವ ಆದೇಶದನುಸಾರ ಕಾಗವಾಡ ತಾಲೂಕಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ತಹಶೀಲ್ದಾರ ರಾಜೇಶ ಬುರ್ಲಿ ತಿಳಿಸಿದರು.

ಅವರು ಶುಕ್ರವಾರ ದಿ. 22 ರಂದು ಕಾಗವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರೆದಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈಗಾಗಲೇ ಆರೋಗ್ಯ ಕೇಂದ್ರದಲ್ಲಿ 30 ಬೆಡ್‌ಗಳ ಕೋವ್ಹಿಡ್ ವಿಭಾಗ ಪ್ರಾರಂಭಿಸಿದ್ದು, 11 ಆಕ್ಷಿಜನ್ ಬೆಡ್‌ಗಳನ್ನು ಪ್ರಾರಂಭಿಸಲಾಗಿದೆ. ಇದಲ್ಲದೇ ಪಿಪಿಇ ಕಿಟ್, ಔಷಧಗಳನ್ನು ದಾಸ್ತಾನು ಮಾಡಲಾಗಿದೆ. ತಾಲೂಕಿನ ಪ್ರತಿ ಗ್ರಾಮಗಳಲ್ಲಿಯೂ ಕೋವ್ಹಿಡ್ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಕೂಡಲೇ ಆಯಾ ಗ್ರಾಮ ಪಂಚಾಯತಿಗಳ ಮುಖಾಂತರ ಸಮುದಾಯ ಆರೋಗ್ಯ ಕೇಂದ್ರಗಳ ಮುಖಾಂತರ ಮಾಡಲಾಗುವುದು. ಸಾರ್ವಜನಿಕರು ಭಯ ಪಡೆದೇ ಕೋವ್ಹಿಡ್ ನಿಯಮಗಳನ್ನು ಪಾಲಿಸಬೇಕು.

ಚಿಕ್ಕ ಮಕ್ಕಳು, ಗರ್ಭಿಣಿಯರು, ಬಾಣಂತಿಯರು, 60 ವರ್ಷ ಮೇಲ್ಪಟ್ಟ ಹಿರಿಯರು ಮತ್ತು ದೊಡ್ಡ ಕಾಯಿಲೆಗಳಿಂದ ಬಳಲುತ್ತಿರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮತ್ತು ಎಲ್ಲ ಸಾರ್ವಜನಿಕರು ಹೊರಗೆ ಹೋಗುವಾಗ ಅಥವಾ ಅನಿವಾರ್ಯವಾಗಿ ಗುಂಪು ಸೇರುವಾಗ ಮಾಸ್ಕ್ ಧರಿಸಬೇಕು. ಅಲ್ಲದೇ ಹೊರ ರಾಜ್ಯಗಳಿಗೆ ತೆರಳುವ ಪ್ರತಿಯೊಬ್ಬರು ಮಾಸ್ಕ್ ಧರಿಸಿ ಪ್ರಯಾಣಿಸಬೇಕು. ಕೆಮ್ಮು, ನೆಗಡಿ, ಜ್ವರ ಇಂತಹ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆದು, ಉಪಚಾರ ಮಾಡಿಕೊಳ್ಳಬೇಕು. ಪ್ರತಿಯೊಬ್ಬರ ಆರೋಗ್ಯ ರಕ್ಷಣ ನಮ್ಮೆಲ್ಲರ ಹೊಣೆ ಆದ್ದರಿಂದ ಎಲ್ಲರು ಮುಂಜಾಗೃತ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.

ಈ ಸಮಯದಲ್ಲಿ ಸಿಡಿಪಿಓ ಸಂಜೀವಕುಮಾರ ಸದಲಗೆ, ಬಿಇಓ ಎಮ್.ಆರ್. ಮುಂಜೆ, ತಾ.ಪಂ. ಇಓ ಪ್ರವೀಣ ಪಾಟೀಲ, ಡಾ. ಪುಷ್ಪಲತಾ ಸುಣ್ಣದಕಲ್ಲ, ಡಾ. ಎಸ್.ಎಸ್. ಕೋಳಿ, ಡಾ. ಸೌಮ್ಯಾ ಪಾಟೀಲ, ಡಾ. ರಾಘವೇಂದ್ರ ಲೋಕುರ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಸೂರಜ ಕುಂಬಾರ, ಜಾವಿದ್ ಮುಂಜಾವರ್, ರವಿ ಸೋಲಾm ಸೇರಿದಂತೆ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಪೋಲಿಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ: ಮಕ್ಕಳಿಗೆ ಕಾನೂನಾಜ್ಞೆ

ಪೋಲಿಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ: ಮಕ್ಕಳಿಗೆ ಕಾನೂನಾಜ್ಞೆ

ಬಾಗಲಕೋಟ: ಜಿಲ್ಲೆಯ ‌ಬಿಳಗಿ ತಾಲೋಕಿನ ಬೀಳಗಿಯ ರುದ್ರಗೌಡ ಪಾಟೀಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಧ್ಯಾರ್ಥಿಗಳಿಗಾಗಿ ಭಾಷಣ, ಸ್ಪರ್ಧೆ ಹಾಗೂ ಅವರ ಮನೋಭಾವ ಬಲವರ್ಧನೆ ಗೋಳಿಸಲು ಹಾಗೂ ಅವರ ಕಲಿಕೆ ಮಟ್ಟವನ್ನು ಹೇಚ್ಚಿಸುವ ನಿಟ್ಟಿನಲ್ಲಿ ಅಗತ್ಯವಾದ ಮಾಹಿತಿಯನ್ನು ತಿಳಿಸಿದರು.

ಕಾನೂನಿನ ಬಗ್ಗೆ ಎಷ್ಟು ತಿಳುವಳಿಕೆ ಹೊಂದಿದ್ದಾರೆ ಮತ್ತು ಕಾನೂನು ಪಾಲನೆಯ ಮಹತ್ವ, ರಸ್ತೆ ಸುರಕ್ಷತೆ, ಸಂಚಾರ ನಿಯಮ ಪಾಲನೆ, ಪೋಕ್ಸೋ ಕಾಯ್ದೆ, ಮಾದಕ ದ್ರವ್ಯದ ದುಷ್ಪರಿಣಾಮಗಳ ಭಾಷಣ ಸ್ಪರ್ಧೆ ಹೀಗೆ ಹತ್ತಾರು ವಿಷಯಗಳ ಕುರಿತು ಮಕ್ಕಳಲ್ಲಿ ಭಾಷಣ ಸ್ಪರ್ದೇ ಆಯೋಜಿಸಿ, ವಿಜೇತ ಪ್ರಥಮ, ದ್ವಿತೀಯ, ತೃತಿಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.

ವಿದ್ಯಾರ್ಥಿಗಳಿಗೆ ಅಪರಾಧ ತಡೆ ಕುರಿತು ಪಿ ಎಸ್ ಐ ಪ್ರೀತಮ್ ನಾಯಕ ಅರಿವು ಮೂಡಿಸಿದರು, ಮತ್ತು ಈ ಸಂದರ್ಭದಲ್ಲಿ ರುದ್ರಗೌಡ್ ಪಾಟೀಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶ್ರೀದೇವಿ ಈ ಪಾಟೀಲ್, ಎ ಎಸ್ ಐ ಬೈಗನಪಲ್ಲಿ, ಎಸ್ ಕೆ ಫಿರ್ಜಾದೆ, ಎನ್ ಆರ್ ಪಾಟೀಲ್ ಹಾಗೂ ಪೊಲೀಸ್ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಆಧಾರ ಕಾರ್ಡ್ ಗೆ ಒಂದು ಕ್ವಾಟರ್ ಫ್ರೀ ಕೊಡಿ ಎಂದು ತಮ್ಮ ಅಳಲನ್ನು ತೊಡಿಕೊಂಡ ಮದ್ಯ ಪ್ರಿಯರು !

ಆಧಾರ ಕಾರ್ಡ್ ಗೆ ಒಂದು ಕ್ವಾಟರ್ ಫ್ರೀ ಕೊಡಿ ಎಂದು ತಮ್ಮ ಅಳಲನ್ನು ತೊಡಿಕೊಂಡ ಮದ್ಯ ಪ್ರಿಯರು !

ಏನಪ್ಪಾ ಇದು ಆಧಾರ ಕಾರ್ಡ್ ಗೆ ಒಂದು ಕ್ವಾಟರ್ ಫ್ರೀ ಕೊಡಿ ಎಂದು ಮದ್ಯ ಪ್ರಿಯರು ಕೇಳತ್ತಿದ್ದಾರಲ್ಲ ನಮ್ಮ ಜನ, ಮುಂದೇ ಇನ್ನೆನೋ ಕೆಳಬಹುದು ಎಂದು ಸಚ್ಚಿವರ ಮುಖದಲ್ಲಿ ನಗು ಹೊರಹೊಮ್ಮಿದ ಘಟನೆ ನಡದಿದೆ.

ಮದ್ಯಪ್ರೀಯರನ್ನು ಸಮಜಾಯಿಸಲು ಹೋದ ಕಾರ್ಮಿಕರ ಸಚಿವ ಸಂತೋಷ ಲಾಡ್ ಅವರಿಗೆ ದಿಕ್ಕುತೋಚದೆ ಎರಾಬಿರಿ ನಕ್ಕು ಬಿಟ್ಟು ಮೌನವಾದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ ಸದ್ದು ಮಾಡುತ್ತಿದ್ದು, ನೋಡುಗರಿಗೆ ಒಂದು ತರಹ ಖುಷಿ ನಿಡುತ್ತಿದೆ.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮಹಿಳೆಯರಿಗೆ ಆಧಾರ ಕಾರ್ಡ್ ಮೂಲಕ ಬಸ್ ಫಾಸ್ ಫ್ರೀ, ಗ್ರಹ ಲಕ್ಷ್ಮೀ ಬಾಗ್ಯ, ಹೀಗೆ ಮಹಿಳೆಯರಿಗೆ ಮಾತ್ರ ಯಾಕೆ ಉಚಿತ ನಾವು ಕೂಡ ಮತ ಚಲಾಯಿಸಿದ್ದೇವೆ ನಮಗೆಕೆ ಏನೂ ಫ್ರೀ ಮಾಡಿಲ್ಲ, ಎಂದು ಸಾಕಷ್ಟು ಗಲಾಟೆಗಳು ಆಗಿಹೋಗಿವೆ.

ಅದರ ಮದ್ಯ ಈಗ ಮದ್ಯ ಪ್ರೀಯರು ಅಧಿವೇಶನದಲ್ಲಿ ಒಂದು ಆಧಾರ ಕಾರ್ಡ್ ಗೆ ಒಂದು ಕ್ವಾಟರ್ ಫ್ರೀ ಕೊಡಿ ಎಂದು ಚಳುವಳಿ ನಡೆಸಿ, ಸಚಿವರ ಬಳಿ ತಮ್ಮ ಅಳಲನ್ನು ತೊಡಿಕೊಂಡ ಘಟನೆ ನಡದಿದೆ, ಈ ವಿಷಯ ಕೆಳಿದ ಸಚ್ಚಿವರು ದಂಗಾಗಿ ಎರಾಬಿರಿ ನಕ್ಕು ಮದ್ಯಪ್ರೀಯರ ಅಹವಾಲನ್ನು ತೆಗೆದುಕೊಂಡು ಸಮಾದಾನಗೊಳಿಸಿದ ವಿಷಯ ಈ ಸಖತ ಸದ್ದು ಮಾಡುತ್ತಿದೆ.

ಒಟ್ಟಾರೆ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಗೋಳು ಒಂದಲ್ಲಾ ಒಂದು ಸಮಸ್ಯೆಗೆ ಸಿಲುಕಿ ಮುಂಬರುವ ದಿನಗಳಲ್ಲಿ ಲೋಕಸಭಾ ಚುನಾವಣೆ ಹೇಗೆ ಎದುರಿಸುತ್ತಾರೊ ಎಂಬುದೆ ಒಂದು ಕುತೂಹಲಕಾರಿಯಾಗಿದೆ.

ವಿಡಿಯೋ ಕೃಪೆ: NB Kannada Channel

ರೈತರ ಜಮೀನುಗಳಿಗೆ ಕಾರ್ಖಾನೆಯ ಕಲುಷಿತ ನೀರನ್ನು ಬಿಡದಂತೆ ತಹಶೀಲ್ದಾರರಿಗೆ ಮನವಿ

ರೈತರ ಜಮೀನುಗಳಿಗೆ ಕಾರ್ಖಾನೆಯ ಕಲುಷಿತ ನೀರನ್ನು ಬಿಡದಂತೆ ತಹಶೀಲ್ದಾರರಿಗೆ ಮನವಿ

ಕಾಗವಾಡ: ಪಟ್ಟಣದ ಶಿರಗುಪ್ಪಿ ಶುಗರ್ಸ್ ನಿಂದ ಶೇಡಬಾಳ ಪಟ್ಟಣದಲ್ಲಿ ಕಾರ್ಖಾನೆಯ ಕೆಮಿಕಲ್ ಯುಕ್ತ ಕಲುಷಿತ ನೀರನ್ನು ಪೈಪಲೈನ್ ಮಾಡುತ್ತಿದ್ದು, ಈ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಜಯ ಕರ್ನಾಟಕ ಸಂಘಟನೆಯವರು ಹಾಗೂ ಗ್ರಾಮಸ್ಥರು ಉಪ ತಹಶಿಲ್ದಾರ ಅಣ್ಣಾಸಾಬ ಕೋರೆಯವರಿಗೆ ಮನವಿ ಸಲ್ಲಿಸಿದರು.

ನಂತರ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ವಿನೋದ ಕಾಂಬ್ಳೆ ಮಾತನಾಡಿ, ಈ ಹಿಂದಿನ ನಾಲ್ಕು ವರ್ಷಗಳ ಶಿರಗುಪ್ಪಿ ಸಕ್ಕರೆ ಕಾರ್ಖಾನೆಯವರು ವಿಷಕಾರಿಯುಕ್ತ ಕಲುಷಿತ ನೀರನ್ನು ಕಾಗವಾಡದಿಂದ ಶೇಡಬಾಳ ಪಟ್ಟಣಕ್ಕೆ ಬಿಡಲು ಪೈಪಲೈನ್ ಕಾಮಗಾರಿ ಆರಂಭಿಸಿದ್ದರು. ಅದರ ವಿರುದ್ದ ಅಲ್ಲಿನ ರೈತರೆಲ್ಲರೂ ವಿರೋಧ ವ್ಯಕ್ತಪಡಿಸಿದ್ದರಿಂದ ಕಾಮಗಾರಿ ಸ್ಥಗಿತಗೊಳಿಸಿದ್ದರು.

ಈಗ ಮತ್ತೆ ಅದೇ ಕಾಮಗಾರಿ ಪ್ರಾರಂಭ ಮಾಡಿದ್ದಾರೆ, ಇದು ಪೂರ್ಣಗೊಂಡ ಮೇಲೆ ಶೇಡವಾಳ ಪಟ್ಟಣ ರೈತರ ಜಮೀನುಗಳಿಗೆ ಹಾಗೂ ಕೆರೆ, ಬಾವಿಗಳಿಗೆ ಕೆಮಿಕಲ್ ಯುಕ್ತ ಕೆಮಿಕಲ್ ನೀರು ಸೇರ್ಪಡೆಗೊಂಡರೆ ಸಂಪೂರ್ಣ ಭೂಮಿಗಳು ಹಾಳಾಗುತ್ತವೆ, ಅಲ್ಲದೇ ಜನರಿಗೂ ತೊಂದರೆಯಾಗುತ್ತದೆ ಮತ್ತು ಅಲ್ಲಿನ ಪರಿಸರ ಸಂಪೂರ್ಣ ಹಾಳಾಗುತ್ತದೆ ಆದ್ದರಿಂದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶಿರಗುಪ್ಪಿ ಸಕ್ಕರೆ ಕಾರ್ಖಾನೆಯವರಿಗೆ ಅದನ್ನು ಬಂದ್ ಮಾಡುವಂತೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.

ಈ ವೇಳೆ ಕಾಗವಾಡ ತಾಲೂಕಾ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಬಸವರಾಜ್ ಮಗದುಮ್, ಶೇಡಬಾಳ ಪಟ್ಟಣ ಅಧ್ಯಕ್ಷ ವಿನೋದ ಕಾಂಬಳೆ, ಉಪಾಧ್ಯಕ್ಷರಾದ ಅನೀಲ್ ಹೆರಲೇ, ಕಾರ್ಯದರ್ಶಿ ಅದಿನಾಥ್ ಲಟ್ಕರ, ಸಂಜು ಅಲಾಸೆ, ಸುಕುಮಾರ್ ಪಾಟೀಲ್, ರಾಜು ಅಲಾಸೆ, ಬಾಬಾಸಾಬ ಕಾಂಬ್ಳೆ, ಸಂಪತಿ ಹೊಂನಕಾಂಬ್ಳೆ, ಸಂತೋಷ ತಳವಾರ, ಜಗ್ಗು ಮರಾಠಿ ,ಅನೀಲ್ ಇರಾಜ, ಅಣ್ಣಸಾಬ ಪಲ್ಲಕಿ ,ಮಾರುತಿ ಪಾಟೀಲ್ ,ಶೇಡಬಾಳ ಪಟ್ಟಣದ ರೈತ ಮುಖಂಡರು ಹಾಗೂ ಎಲ್ಲಾ ರೈತರು ಇದ್ದರು.

ಹುಕ್ಕೇರಿ ತಾಲೂಕಿನ ಶಿರೂರು ಡ್ಯಾಂ ಹತ್ತಿರ ಹೆಬ್ಬಾವು ಪ್ರತ್ಯೆಕ್ಷ, ಹುಕ್ಕೇರಿ ಉರಗ ತಜ್ಞರಿಂದ ರಕ್ಷಣೆ

ಹುಕ್ಕೇರಿ ತಾಲೂಕಿನ ಶಿರೂರು ಡ್ಯಾಂ ಹತ್ತಿರ ಹೆಬ್ಬಾವು ಪ್ರತ್ಯೆಕ್ಷ, ಹುಕ್ಕೇರಿ ಉರಗ ತಜ್ಞರಿಂದ ರಕ್ಷಣೆ


ಯಮಕನಮರಡಿ: ಬಸ್ಸಾಪೂರ ಹತ್ತಿರದ ಶಿರೂರ ಡ್ಯಾಂ ಪರಿಸರದಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದೆ. ಬೆಳಗಿನ ಜಾವ ಶಿರೂರ ಡ್ಯಾಂ ಪರಿಸರದಲ್ಲಿ ಬೃಹತ್ ಆಕಾರದ ಹೆಬ್ಬಾವು ಕಂಡು ಬಂದಿದ್ದರಿಂದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಅರಣ್ಯ ಅಧಿಕಾರಿ ಪ್ರಸನ್ನ ಬೆಲ್ಲದ ಆಗಮಿಸಿ ಹೆಬ್ಬಾವು ಇರುವದು ಖಚಿತ ಪಡಿಸಿಕೊಂಡು ಹುಕ್ಕೇರಿ ಪಟ್ಟಣದ ಉರಗ ತಜ್ಞರು ಅನಿಲ ಬಡಿಗೇರ ತಂಡವನ್ನು ಕರೆಸಿಕೊಂಡು ಹೆಬ್ಬಾವ ಹಿಡಿಯಲು ಯಶಸ್ವಿಯಾಗಿದ್ದಾರೆ.


ಈ ಭಾಗದಲ್ಲಿ ಅಪರೂಪವಾದ ಹೆಬ್ಬಾವು ಕಂಡು ಜನರು ಭಯ ಭೀತರಾದರು, ಉರಗ ತಜ್ಞರು ಅನಿಲ ಬಡಿಗೇರ ಮತ್ತು ಅವರ ತಂಡ ಅತಿ ಚಾಣಾಕ್ಷ ತನದಿಂದ ಹಾವನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟರು.

ಉರಗ ತಜ್ಞ ಅನಿಲ ಬಡಿಗೇರ ತಂಡದ ಕಾರ್ಯವನ್ನು ಮೆಚ್ವಿಸಿ ಶ್ಲಾಘಿಸಿದರು, ಈ ಸಂದರ್ಬದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಎಂ ಪಿ ಪೂಜಾರ, ಎಸ್ ಪಿ ಕುರಪಿ, ಮಾರುತಿ ಭಜಂತ್ರಿ, ಉಪಸ್ಥಿತರಿದ್ದರು.


ಪೋಟೋ ಶೀರ್ಷಿಕೆ: ವಾಯ.ಎಮ್ ಕೆ
ಯಮಕನಮರಡಿ ಸಮಿಪ ಶಿರೂರ ಬಳಿ ಪ್ರತ್ಯಕ್ಷವಾದ ಹೆಬ್ಬಾವು ರಕ್ಷಣೆಮಾಡಿದ ಹುಕ್ಕೇರಿ ಯ ಉರಗ ತಜ್ಞರು ಅಮಿಲ ಬಡಿಗೇರ ತಂಡ.

ವರದಿ- ಬಿ ಎಮ್ ಗ್ಯಾಳಗೋಳ.

ಧಾರವಾಡ: ಹಾಡಬೇಕು ಬಾಯಿ ತುಂಬ ಅಯ್ಯಪ್ಪನಾಮವ ನೋಡಬೇಕು ಕಣ್ತುಂಬ ಅಯ್ಯಪ್ಪ ಮಹಾಪೂಜೆಯ

ಧಾರವಾಡ: ಹಾಡಬೇಕು ಬಾಯಿ ತುಂಬ ಅಯ್ಯಪ್ಪನಾಮವ ನೋಡಬೇಕು ಕಣ್ತುಂಬ ಅಯ್ಯಪ್ಪ ಮಹಾಪೂಜೆಯ !

ಧಾರವಾಡ: ಸಕಲ ಜೀವರಾಶಿಗೆ ಒಳಿತು ಬಯಸುವ ನಿಟ್ಟಿನಲ್ಲಿ ಲೋಕ ಕಲ್ಯಾಣಕ್ಕಾಗಿ ವರ್ಷದ 365 ದಿವಸಗಳ ಕಾಲ ನಿತ್ಯ ನಿರಂತರವಾಗಿ ಶ್ರೀ ಅಯ್ಯಪ್ಪನ ಪೂಜೆ ನೆರವೇರಿಸಿಕೊಂಡು ಬರುತ್ತಿರುವ ಶ್ರೀ ಧರ್ಮಶಾಸ್ತ್ರ ಸೇವಾ ಸಮಿತಿ ಸಂಸ್ಥಾಪಕ ಶ್ರೀ ರಮೇಶ ಪಾತ್ರೋಟ ಗುರುಸ್ವಾಮಿಗಳು.

ಶ್ರೀ ರಮೇಶ ಪಾತ್ರೋಟ ಗುರುಸ್ವಾಮಿಗಳು ನೇತೃತ್ವದಲ್ಲಿಂದು ಶ್ರೀ ಅಯ್ಯಪನ ಪೂಜೆ ಹಾಗೂ ಅಂಬಾರಿ ಮೆರವಣಿಗೆ ಭಕ್ತರ ಇಷ್ಟಾರ್ಥ ಸಿದ್ದಿಗಾಗಿ ಬೆಳಗ್ಗೆ ಅಭಿಷೇಕ ಹಾಗೂ ಭಜನಾ ಕಾರ್ಯಕ್ರಮ ಮತ್ತು ಪೂಜಾ ವಿಧಿವಿಧಾನಗಳು ನೆರವೇರಿದವು.

ನಂತರ ಉಡುಪಿಯ ಶ್ರೀಧರ ಭಟ್ಟ ಅವರಿಂದ ಚಂಡಿಕಾ ಹೋಮ ಮತ್ತು ಅಭಿಷೇಕ ಹಾಗೂ ಕುಂಭಮೇಳ ಭಜನಾ ಕಾರ್ಯಕ್ರಮ ಮತ್ತು ಪೂಜಾ ವಿಧಿವಿಧಾನಗಳು ನೆರವೇರಿತು. ಮಧ್ಯಾಹ್ನ 3 ಕ್ಕೆ ರಮೇಶ ಪಾತ್ರೋಟ ಗುರುಸ್ವಾಮಿಜಿ ಅಧ್ಯಕ್ಷತೆಯಲ್ಲಿ ಸಿದ್ಧಾರೂಢ ಮಠದ ಶ್ರೀ ಶಿವಪುತ್ರ ಸ್ವಾಮಿಜಿ, ತೆಂಕಲಗೂಡ ಮಠದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ಸಾನಿಧ್ಯದಲ್ಲಿ ಸಮಾರಂಭ ನಡೆಯಿತು.

ವಿಜಯಾನಂದ ಶೆಟ್ಟಿ, ಮಹೇಶ ಶೆಟ್ಟಿ ಪಡಿ ಪೂಜೆ ನೆರವೇರಿಸಿದರು, ಪಾಲಿಕೆ ಸದಸ್ಯ ಮಂಜು ಬಟ್ಟಣ್ಣವರ ಕಳಶ ಪೂಜೆ ನೆರವೇರಿಸಿದರೆ ಪಾಲಿಕೆ ಸದಸ್ಯ ಶಿವು ಹಿರೇಮಠ ಹಾಗೂ ರವಿ ಜಾಧವ ಕುಂಭ ಪೂಜೆ ನೆರವೇರಿಸಿದರು. ನಂತರ ದೇವಸ್ಥಾನದಿಂದ ಬೃಹತ್ ರಥ, ಕಲಾ ತಂಡ ವಿವಿಧ ವಾಧ್ಯ ಮತ್ತು ಕುಂಭ ಮೇಳಗಳೊಂದಿಗೆ ಅಯ್ಯಪ್ಪ ಸ್ವಾಮಿ ಮೆರವಣಿಗೆ ಹೊರಟಿತು.

ಶಹರದ ರೆವೆನ್ಯು ಕಾಲನಿ, ಸಾಯಿ ಮಂದಿರ ರಸ್ತೆ, ದಾಸನಕೊಪ್ಪ ಸರ್ಕಲ, ಸಪ್ತಾಪೂರ, ಜಯನಗರ, ಶ್ರೀನಗರ, ಶಕ್ತಿ ಕಾಲೋನಿ ಮೂಲಕ ವಿವಿಧ ಮುಖ್ಯ ರಸ್ತೆ ಮೂಲಕ ಸಂಚರಿಸಿ ಮರಳಿ ದೇವಸ್ಥಾನ ತಲುಪಿತು. ಉತ್ಸವ ಸಮಿತಿ ಅಧ್ಯಕ್ಷ ಉದಯ ಶೆಟ್ಟಿ ಉಪಸ್ಥಿತರಿದ್ದರು.

Lava Storm 5G ರೆಂಡರ್, ಸ್ಪೆಕ್ಸ್ ಮತ್ತು ಬೆಲೆ ಪಾಯಿಂಟ್ ಡಿಸೆಂಬರ್ 21 ಬಿಡುಗಡೆಗೆ ಮುಂಚಿತವಾಗಿ ಸೋರಿಕೆಯಾಗಿದೆ

Lava Storm 5G ರೆಂಡರ್, ಸ್ಪೆಕ್ಸ್ ಮತ್ತು ಬೆಲೆ ಪಾಯಿಂಟ್ ಡಿಸೆಂಬರ್ 21 ಬಿಡುಗಡೆಗೆ ಮುಂಚಿತವಾಗಿ ಸೋರಿಕೆಯಾಗಿದೆ

Lava Yuva 3 Pro ಇಂಡಿಯಾದ ಇತ್ತೀಚಿನ ಬಿಡುಗಡೆಯ ನಂತರ, ಬ್ರ್ಯಾಂಡ್ 2023 ರ ಅಂತ್ಯದ ಮೊದಲು ಮತ್ತೊಂದು ಸಾಧನವನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. Lava Storm 5G ಡಿಸೆಂಬರ್ 21 ರಂದು ಪ್ರಾರಂಭಗೊಳ್ಳಲಿದೆ. ಲಾಂಚ್‌ಗೆ ಮುಂಚಿತವಾಗಿ, ಟಿಪ್‌ಸ್ಟರ್ ಮುಕುಲ್ ಶರ್ಮಾ ಕೆಲವು ವಿವರಗಳನ್ನು ಹಂಚಿಕೊಂಡಿದ್ದಾರೆ ಸಾಧನದ ಬಗ್ಗೆ ಮತ್ತು ಚಿತ್ರವನ್ನು ಹಂಚಿಕೊಂಡಿದ್ದಾರೆ.

Lava Storm 5G ಸೋರಿಕೆಯಾದ ವಿವರಗಳು
ಮುಕುಲ್ ಶರ್ಮಾ ಅವರು ಕಪ್ಪು ಬಣ್ಣದ Lava Storm 5G ಯ ಚಿತ್ರವನ್ನು ಹಂಚಿಕೊಂಡಿದ್ದಾರೆ, ಫ್ಲಾಟ್ ಸೈಡ್‌ಗಳು ಮತ್ತು ಸ್ಯಾಮ್‌ಸಂಗ್‌ನ ಇತ್ತೀಚಿನ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳನ್ನು ಹೋಲುವ ಚಾಚಿಕೊಂಡಿರುವ ಕ್ಯಾಮೆರಾ ಮಾಡ್ಯೂಲ್ ಜೊತೆಗೆ ಫ್ಲಾಟ್ ಫ್ರೇಮ್ ಅನ್ನು ಬಹಿರಂಗಪಡಿಸಿದ್ದಾರೆ. ಹಿಂಭಾಗದಲ್ಲಿ ಎರಡು ಕ್ಯಾಮೆರಾ ಲೆನ್ಸ್‌ಗಳಿವೆ, ಮತ್ತು ಮೂರನೇ ಮುಂಚಾಚಿರುವಿಕೆ ಎಲ್ಇಡಿ ಫ್ಲ್ಯಾಷ್ ಅನ್ನು ಹೊಂದಿದೆ. ಬಲಭಾಗವು ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್ ಅನ್ನು ಒಳಗೊಂಡಿದೆ.

ಅದರ ಜೊತೆಗೆ, ಮುಕುಲ್ ಕೆಲವು ಪ್ರಮುಖ ಸ್ಪೆಕ್ಸ್ ಮತ್ತು ಸಾಧನದ ಬೆಲೆಯನ್ನು ಬಹಿರಂಗಪಡಿಸಿದ್ದಾರೆ. ಟ್ವೀಟ್ ಪ್ರಕಾರ, ಸ್ಟಾರ್ಮ್ 5G ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್ ಅನ್ನು ಹೊಂದಿರುತ್ತದೆ, ಇದು ಮೂಲಭೂತವಾಗಿ ಡೈಮೆನ್ಸಿಟಿ 810 ಪ್ರೊಸೆಸರ್ ಎಂದು ಮರುಹೆಸರಿಸಲಾಗಿದೆ. Redmi Note 13, Note 13R Pro, Tecno Pova 5 Pro ಮತ್ತು Infinix Note 30 5G ನಂತಹ ಸಾಧನಗಳು ಈ ಚಿಪ್‌ಸೆಟ್ ಅನ್ನು ಒಳಗೊಂಡಿರುವ ಕೆಲವು ಡಿವೈಸ್‌ಗಳಾಗಿವೆ.

ಹೆಚ್ಚುವರಿ 8GB ವರ್ಚುವಲ್ RAM ಗೆ ಬೆಂಬಲದೊಂದಿಗೆ ಸಾಧನವು 8GB RAM ಅನ್ನು ಹೊಂದಿರುತ್ತದೆ ಎಂದು ಟಿಪ್‌ಸ್ಟರ್ ಬಹಿರಂಗಪಡಿಸುತ್ತದೆ. ಇದು 8MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಸಹ ಹೊಂದಿದೆ, ಜೊತೆಗೆ ಅದರ ಅನ್ಡಿಸ್ಕಾಲ್ಡ್ ಪ್ರಾಥಮಿಕ ಸಂವೇದಕವನ್ನು ಹೊಂದಿರುತ್ತದೆ. ಬೆಲೆಗೆ ಸಂಬಂಧಿಸಿದಂತೆ, ಸಾಧನದ ಬೆಲೆ ₹15,000 ಕ್ಕಿಂತ ಕಡಿಮೆ ಇರುತ್ತದೆ ಎಂದು ಟಿಪ್‌ಸ್ಟರ್ ವರದಿ ಮಾಡಿದೆ. ನಾವು ಡಿಸೆಂಬರ್ 21 ರ ಉಡಾವಣೆಗೆ ಹತ್ತಿರವಾಗುತ್ತಿದ್ದಂತೆ ಹೆಚ್ಚಿನ ವಿವರಗಳು ಲಭ್ಯವಾಗುವ ನಿರೀಕ್ಷೆಯಿದೆ.ಈ ಮಧ್ಯೆ, ಭಾರತದಲ್ಲಿ ಕಳೆದ ವಾರ ಬಿಡುಗಡೆಯಾದ ಇತ್ತೀಚೆಗೆ ಬಿಡುಗಡೆಯಾದ Lava Yuva 3 Pro ನ ನಮ್ಮ ವ್ಯಾಪ್ತಿಯನ್ನು ನೀವು ಪರಿಶೀಲಿಸಬಹುದು.

SBI : ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಅವರಿಂದ ಭಾರತೀಯ ಆರ್ಥಿಕತೆ ಬಗ್ಗೆ ಹೇಳಿಕೆ

ನಾವು ಜಗತ್ತಿನಾದ್ಯಂತ ನೋಡಿದಾಗ, ಭಾರತದ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ: ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ

ಬ್ಯಾಂಕಿಂಗ್ ವ್ಯವಸ್ಥೆಯು ಹಿಂದಿನ ತಪ್ಪುಗಳಿಂದ ಪಾಠವನ್ನು ಕಲಿತಿದೆ ಮತ್ತು ಸಾಲವು ಹೆಚ್ಚು ಉತ್ತಮವಾಗಿದೆ ಮತ್ತು ಹೆಚ್ಚು ತಿಳುವಳಿಕೆಯಾಗಿದೆ ಎಂದು ದಿನೇಶ್ ಕುಮಾರ್ ಖಾರಾ ಹೇಳುತ್ತಾರೆ.

ಸಾಲ ವಜಾಗೊಳಿಸುವ ಯುಗವು ಮುಗಿದಿದೆ, 2015 ರಲ್ಲಿ ಆಗಿನ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರ ಅಡಿಯಲ್ಲಿ ಪ್ರಾರಂಭವಾದ ಆಸ್ತಿ ಗುಣಮಟ್ಟದ ಪರಿಶೀಲನೆ (AQR) ವ್ಯವಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸಿದೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಈಗ ಆಸ್ತಿ ಬೆಳವಣಿಗೆಗೆ ಹಣ ನೀಡಲು ಸಿದ್ಧವಾಗಿದೆ. 7 ಲಕ್ಷ ಕೋಟಿ, ಕಳೆದ ಎರಡು ವರ್ಷಗಳಲ್ಲಿ 65,000 ಕೋಟಿ ಲಾಭವನ್ನು ಬಂಡವಾಳಕ್ಕೆ ಹಿಂತಿರುಗಿಸಿದೆ ಎಂದು ಭಾರತದ ಅತಿದೊಡ್ಡ ಬ್ಯಾಂಕ್‌ನ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಹೇಳಿದರು.

AQR ದೊಡ್ಡ ಪ್ರಮಾಣದ ಕೆಟ್ಟ ಸಾಲಗಳ ಹೊರಹೊಮ್ಮುವಿಕೆಗೆ ಕಾರಣವಾಯಿತು ಎಂದು ಖಾರಾ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. “ಇದು (ಎಕ್ಯೂಆರ್) ಉತ್ತಮ ಕೆಲಸ ಮಾಡಿದೆ. ಯಾವುದಕ್ಕೆ ಒದಗಿಸಬೇಕೋ ಅದನ್ನು ಒದಗಿಸಬೇಕು ಎಂದು ಖಚಿತಪಡಿಸಿಕೊಳ್ಳಲು ಇದು ಬ್ಯಾಂಕ್‌ಗಳಿಗೆ ಸಹಾಯ ಮಾಡುತ್ತದೆ.

ಭಾರತೀಯ ಬ್ಯಾಂಕ್‌ಗಳು ಕಳೆದ ಐದು ವರ್ಷಗಳಲ್ಲಿ 10 ಲಕ್ಷ ಕೋಟಿ ರೂ.ಗೂ ಹೆಚ್ಚು ಕೆಟ್ಟ ಸಾಲಗಳನ್ನು ಮನ್ನಾ ಮಾಡಿದ ನಂತರ, ಬ್ಯಾಂಕ್‌ಗಳ ಸಾಲವು ಹೆಚ್ಚು ಉತ್ತಮವಾಗಿದೆ ಮತ್ತು ಹೆಚ್ಚು ತಿಳುವಳಿಕೆಯನ್ನು ಪಡೆದುಕೊಂಡಿದೆ, ವಿವಿಧ ಬ್ಯಾಂಕ್‌ಗಳು ವಿವಿಧ ಹಂತಗಳಲ್ಲಿ ತಮ್ಮ ಅಪಾಯ ನಿರ್ವಹಣೆ ಮತ್ತು ಅಂಡರ್‌ರೈಟಿಂಗ್ ಅಭ್ಯಾಸಗಳನ್ನು ಬಲಪಡಿಸುತ್ತಿವೆ, ಎಂದು ಎಸ್‌ಬಿಐ ಅಧ್ಯಕ್ಷರು ಹೇಳಿದರು.

ರಾಜನ್ ಅವರ AQR ಆರಂಭದಲ್ಲಿ ಆರ್ಥಿಕ ಬೆಳವಣಿಗೆಯನ್ನು ನಿಧಾನಗೊಳಿಸಿದ್ದಕ್ಕಾಗಿ ಸರ್ಕಾರದಲ್ಲಿನ ಕೆಲವು ಅರ್ಥಶಾಸ್ತ್ರಜ್ಞರಿಂದ ಟೀಕೆಗೆ ಒಳಗಾಯಿತು ಮತ್ತು ನಂತರ ಕೆಟ್ಟ ಸಾಲಗಳ ಪ್ರಮಾಣವನ್ನು ಕಡಿಮೆ ಅಂದಾಜು ಮಾಡಿತು.

ಕಳೆದ ಐದು ವರ್ಷಗಳಲ್ಲಿ, ಬ್ಯಾಂಕ್‌ಗಳ ಒಟ್ಟು ಅನುತ್ಪಾದಕ ಆಸ್ತಿಗಳು (ಎನ್‌ಪಿಎ) ಸುಮಾರು ಶೇಕಡಾ 46 ರಷ್ಟು ಕಡಿಮೆಯಾಗಿದೆ – 2017-2018 ರ ಹಣಕಾಸು ವರ್ಷದಲ್ಲಿ (ಎಫ್‌ವೈ) 10.21 ಲಕ್ಷ ಕೋಟಿಯಿಂದ ಮಾರ್ಚ್ 2023 ರ ವೇಳೆಗೆ 5.55 ಲಕ್ಷ ಕೋಟಿಗೆ ಇಳಿದಿದೆ.

ಭಾರತದ ಆರ್ಥಿಕತೆಯು ಸುವರ್ಣ ಹಂತದಲ್ಲಿದೆ ಎಂದು ಖಾರಾ ಹೇಳಿದರು, ದ್ವಿತೀಯಾರ್ಧದಲ್ಲಿ ಕೃಷಿ ವಲಯದಲ್ಲಿ ಆರ್ಥಿಕ ಚಟುವಟಿಕೆಯನ್ನು ಎತ್ತಿಕೊಳ್ಳುವುದು, ಎಫ್‌ಎಂಸಿಜಿ ಡೇಟಾವು ಸಕಾರಾತ್ಮಕ ಪ್ರವೃತ್ತಿಯನ್ನು ತೋರಿಸುತ್ತದೆ ಮತ್ತು ಪ್ರಾಯೋಗಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಗುಂಡಿನ ದಾಳಿ ನಡೆಸುತ್ತಿದೆ. “ಬಹುಶಃ ಅದು (ಆರ್ಥಿಕತೆ) ಸುವರ್ಣ ಹಂತದಲ್ಲಿದೆ ಎಂದು ನಾನು ಹೇಳುತ್ತೇನೆ. ಕೃಷಿಯಲ್ಲಿ, ಮೊದಲಾರ್ಧದಲ್ಲಿ, ಸ್ವಲ್ಪ ಕಾಳಜಿ ಇತ್ತು, ಆದರೆ ದ್ವಿತೀಯಾರ್ಧದಲ್ಲಿ ನಾವು ಕೃಷಿ ವಲಯದಲ್ಲಿಯೂ ಆರ್ಥಿಕ ಚಟುವಟಿಕೆಯನ್ನು ಪ್ರಾರಂಭಿಸಿದ್ದೇವೆ. ನಾವು ಎಫ್‌ಎಂಸಿಜಿ ಡೇಟಾವನ್ನು ನೋಡಿದಾಗ, ದ್ವಿತೀಯಾರ್ಧವು ಸಕಾರಾತ್ಮಕ ಪ್ರವೃತ್ತಿಯನ್ನು ತೋರಿಸುತ್ತಿದೆ. ಆ ಮಟ್ಟಿಗೆ ಹೇಳುವುದಾದರೆ, ಪ್ರಾಯೋಗಿಕವಾಗಿ ಎಲ್ಲಾ ವಲಯಗಳು ಗುಂಡು ಹಾರಿಸುತ್ತಿವೆ ಎಂದು ನಾನು ಭಾವಿಸುತ್ತೇನೆ. ಇದು ತುಂಬಾ ಸಕಾರಾತ್ಮಕ ಸಂಕೇತವಾಗಿದೆ, ”ಖಾರಾ ಹೇಳಿದರು.

“ಅಲ್ಲದೆ, ನಾವು ಜಗತ್ತಿನಾದ್ಯಂತ ನೋಡಿದಾಗ, ಭಾರತೀಯ ಆರ್ಥಿಕತೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ಅವರು ಹೇಳಿದರು. “ನಮ್ಮ ಜಿಡಿಪಿಯ ಮಹತ್ವದ ಭಾಗವು ನಮ್ಮ ದೇಶೀಯ ಆರ್ಥಿಕತೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳು ಸವಾಲುಗಳನ್ನು ಹೊಂದಿವೆ ಮತ್ತು ಆ ಮಟ್ಟಿಗೆ, ಅದು ಅಂತಿಮವಾಗಿ ನಮ್ಮ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ತೋರಿಸುತ್ತದೆ.

ಜರ್ನಲಿಸಂ ಆಫ್ ಕರೇಜ್ಚಂದಾದಾರರಾಗಿನನ್ನ ಖಾತೆಮುಖಪುಟನಗರಗಳುಭಾರತವಿವರಿಸಿದರುಅಭಿಪ್ರಾಯವ್ಯಾಪಾರಮನರಂಜನೆಕ್ರೀಡೆರಾಜಕೀಯಜೀವನಶೈಲಿಟೆಕ್ಶಿಕ್ಷಣತನಿಖೆಗಳುಸಂಶೋಧನೆವೀಡಿಯೊಗಳುಪಾಡ್ಕ್ಯಾಸ್ಟ್🎙️ 3 ವಿಷಯಗಳ ಪಾಡ್‌ಕ್ಯಾಸ್ಟ್ಕ್ರಾಸ್ವರ್ಡ್ ಪ್ಲೇ ಮಾಡಿಇತ್ತೀಚಿನ ಸುದ್ದಿಪ್ರೀಮಿಯಂ ಕಥೆಗಳುUPSC ವಿಶೇಷಆರೋಗ್ಯ ಮತ್ತು ಸ್ವಾಸ್ಥ್ಯಲೈವ್ ಟಿವಿಸುದ್ದಿ ವ್ಯಾಪಾರ ಬ್ಯಾಂಕಿಂಗ್ ಮತ್ತು ಹಣಕಾಸು ನಾವು ಜಗತ್ತಿನಾದ್ಯಂತ ನೋಡಿದಾಗ, ಭಾರತದ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ: ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾಪ್ರೀಮಿಯಂನಾವು ಜಗತ್ತಿನಾದ್ಯಂತ ನೋಡಿದಾಗ, ಭಾರತದ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ: ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾಬ್ಯಾಂಕಿಂಗ್ ವ್ಯವಸ್ಥೆಯು ಹಿಂದಿನ ತಪ್ಪುಗಳಿಂದ ಪಾಠವನ್ನು ಕಲಿತಿದೆ ಮತ್ತು ಸಾಲವು ಹೆಚ್ಚು ಉತ್ತಮವಾಗಿದೆ ಮತ್ತು ಹೆಚ್ಚು ತಿಳುವಳಿಕೆಯಾಗಿದೆ ಎಂದು ದಿನೇಶ್ ಕುಮಾರ್ ಖಾರಾ ಹೇಳುತ್ತಾರೆ.ಜಾಹೀರಾತುಹಿತೇಶ್ ವ್ಯಾಸ್ +2 ಇನ್ನಷ್ಟು ಬರೆದಿದ್ದಾರೆನವೀಕರಿಸಲಾಗಿದೆ: ಡಿಸೆಂಬರ್ 18, 2023 21:24 ISTನಮ್ಮನ್ನು ಅನುಸರಿಸಿಭಾರತೀಯ ಆರ್ಥಿಕತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ (ಎಕ್ಸ್‌ಪ್ರೆಸ್ ಫೈಲ್ ಫೋಟೋ)ಸಾಲ ವಜಾಗೊಳಿಸುವ ಯುಗವು ಮುಗಿದಿದೆ, 2015 ರಲ್ಲಿ ಆಗಿನ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರ ಅಡಿಯಲ್ಲಿ ಪ್ರಾರಂಭವಾದ ಆಸ್ತಿ ಗುಣಮಟ್ಟದ ಪರಿಶೀಲನೆ (AQR) ವ್ಯವಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸಿದೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಈಗ ಆಸ್ತಿ ಬೆಳವಣಿಗೆಗೆ ಹಣ ನೀಡಲು ಸಿದ್ಧವಾಗಿದೆ.

7 ಲಕ್ಷ ಕೋಟಿ, ಕಳೆದ ಎರಡು ವರ್ಷಗಳಲ್ಲಿ 65,000 ಕೋಟಿ ಲಾಭವನ್ನು ಬಂಡವಾಳಕ್ಕೆ ಹಿಂತಿರುಗಿಸಿದೆ ಎಂದು ಭಾರತದ ಅತಿದೊಡ್ಡ ಬ್ಯಾಂಕ್‌ನ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಹೇಳಿದರು.AQR ದೊಡ್ಡ ಪ್ರಮಾಣದ ಕೆಟ್ಟ ಸಾಲಗಳ ಹೊರಹೊಮ್ಮುವಿಕೆಗೆ ಕಾರಣವಾಯಿತು ಎಂದು ಖಾರಾ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. “ಇದು (ಎಕ್ಯೂಆರ್) ಉತ್ತಮ ಕೆಲಸ ಮಾಡಿದೆ. ಯಾವುದಕ್ಕೆ ಒದಗಿಸಬೇಕೋ ಅದನ್ನು ಒದಗಿಸಬೇಕು ಎಂದು ಖಚಿತಪಡಿಸಿಕೊಳ್ಳಲು ಇದು ಬ್ಯಾಂಕ್‌ಗಳಿಗೆ ಸಹಾಯ ಮಾಡುತ್ತದೆ.ಜಾಹೀರಾತುಭಾರತೀಯ ಬ್ಯಾಂಕ್‌ಗಳು ಕಳೆದ ಐದು ವರ್ಷಗಳಲ್ಲಿ 10 ಲಕ್ಷ ಕೋಟಿ ರೂ.ಗೂ ಹೆಚ್ಚು ಕೆಟ್ಟ ಸಾಲಗಳನ್ನು ಮನ್ನಾ ಮಾಡಿದ ನಂತರ, ಬ್ಯಾಂಕ್‌ಗಳ ಸಾಲವು ಹೆಚ್ಚು ಉತ್ತಮವಾಗಿದೆ ಮತ್ತು ಹೆಚ್ಚು ತಿಳುವಳಿಕೆಯನ್ನು ಪಡೆದುಕೊಂಡಿದೆ, ವಿವಿಧ ಬ್ಯಾಂಕ್‌ಗಳು ವಿವಿಧ ಹಂತಗಳಲ್ಲಿ ತಮ್ಮ ಅಪಾಯ ನಿರ್ವಹಣೆ ಮತ್ತು ಅಂಡರ್‌ರೈಟಿಂಗ್ ಅಭ್ಯಾಸಗಳನ್ನು ಬಲಪಡಿಸುತ್ತಿವೆ. , ಎಸ್‌ಬಿಐ ಅಧ್ಯಕ್ಷರು ಹೇಳಿದರು.ರಾಜನ್ ಅವರ AQR ಆರಂಭದಲ್ಲಿ ಆರ್ಥಿಕ ಬೆಳವಣಿಗೆಯನ್ನು ನಿಧಾನಗೊಳಿಸಿದ್ದಕ್ಕಾಗಿ ಸರ್ಕಾರದಲ್ಲಿನ ಕೆಲವು ಅರ್ಥಶಾಸ್ತ್ರಜ್ಞರಿಂದ ಟೀಕೆಗೆ ಒಳಗಾಯಿತು ಮತ್ತು ನಂತರ, ಕೆಟ್ಟ ಸಾಲಗಳ ಪ್ರಮಾಣವನ್ನು ಕಡಿಮೆ ಅಂದಾಜು ಮಾಡಿತು.ಜಾಹೀರಾತುಕಳೆದ ಐದು ವರ್ಷಗಳಲ್ಲಿ, ಬ್ಯಾಂಕ್‌ಗಳ ಒಟ್ಟು ಅನುತ್ಪಾದಕ ಆಸ್ತಿಗಳು (ಎನ್‌ಪಿಎ) ಸುಮಾರು ಶೇಕಡಾ 46 ರಷ್ಟು ಕಡಿಮೆಯಾಗಿದೆ – 2017-2018 ರ ಹಣಕಾಸು ವರ್ಷದಲ್ಲಿ (ಎಫ್‌ವೈ) 10.21 ಲಕ್ಷ ಕೋಟಿಯಿಂದ ಮಾರ್ಚ್ 2023 ರ ವೇಳೆಗೆ 5.55 ಲಕ್ಷ ಕೋಟಿಗೆ ಇಳಿದಿದೆ.ಹಬ್ಬದ ಕೊಡುಗೆಐಡಿಯಾ ಎಕ್ಸ್ಚೇಂಜ್ನಲ್ಲಿ ರಘುರಾಮ್ ರಾಜನ್ | ಕಲ್ಪನೆಗಳು ಭವಿಷ್ಯದ ಕರೆನ್ಸಿಯಾಗಿರುವಾಗ ಪ್ರಜಾಪ್ರಭುತ್ವವನ್ನು ಹಿಂತಿರುಗಿಸುವುದು ಅತ್ಯಂತ ಕುರುಡು ಕೆಲಸವಾಗಿದೆ.ಭಾರತದ ಆರ್ಥಿಕತೆಯು ಸುವರ್ಣ ಹಂತದಲ್ಲಿದೆ ಎಂದು ಖಾರಾ ಹೇಳಿದರು, ದ್ವಿತೀಯಾರ್ಧದಲ್ಲಿ ಕೃಷಿ ವಲಯದಲ್ಲಿ ಆರ್ಥಿಕ ಚಟುವಟಿಕೆಯನ್ನು ಎತ್ತಿಕೊಳ್ಳುವುದು, ಎಫ್‌ಎಂಸಿಜಿ ಡೇಟಾವು ಸಕಾರಾತ್ಮಕ ಪ್ರವೃತ್ತಿಯನ್ನು ತೋರಿಸುತ್ತದೆ ಮತ್ತು ಪ್ರಾಯೋಗಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಗುಂಡಿನ ದಾಳಿ ನಡೆಸುತ್ತಿದೆ. “ಬಹುಶಃ ಅದು (ಆರ್ಥಿಕತೆ) ಸುವರ್ಣ ಹಂತದಲ್ಲಿದೆ ಎಂದು ನಾನು ಹೇಳುತ್ತೇನೆ. ಕೃಷಿಯಲ್ಲಿ, ಮೊದಲಾರ್ಧದಲ್ಲಿ, ಸ್ವಲ್ಪ ಕಾಳಜಿ ಇತ್ತು, ಆದರೆ ದ್ವಿತೀಯಾರ್ಧದಲ್ಲಿ ನಾವು ಕೃಷಿ ವಲಯದಲ್ಲಿಯೂ ಆರ್ಥಿಕ ಚಟುವಟಿಕೆಯನ್ನು ಪ್ರಾರಂಭಿಸಿದ್ದೇವೆ. ನಾವು FMCG ಡೇಟಾವನ್ನು ನೋಡಿದಾಗ, ದ್ವಿತೀಯಾರ್ಧವು ಧನಾತ್ಮಕ ಪ್ರವೃತ್ತಿಯನ್ನು ತೋರಿಸುತ್ತಿದೆ.

ಆ ಮಟ್ಟಿಗೆ ಹೇಳುವುದಾದರೆ, ಪ್ರಾಯೋಗಿಕವಾಗಿ ಎಲ್ಲಾ ವಲಯಗಳು ಗುಂಡು ಹಾರಿಸುತ್ತಿವೆ ಎಂದು ನಾನು ಭಾವಿಸುತ್ತೇನೆ. ಇದು ತುಂಬಾ ಸಕಾರಾತ್ಮಕ ಸಂಕೇತವಾಗಿದೆ, ”ಖಾರಾ ಹೇಳಿದರು.ಜಾಹೀರಾತು”ಅಲ್ಲದೆ, ನಾವು ಜಗತ್ತಿನಾದ್ಯಂತ ನೋಡಿದಾಗ, ಭಾರತೀಯ ಆರ್ಥಿಕತೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ಅವರು ಹೇಳಿದರು. “ನಮ್ಮ ಜಿಡಿಪಿಯ ಮಹತ್ವದ ಭಾಗವು ನಮ್ಮ ದೇಶೀಯ ಆರ್ಥಿಕತೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳು ಸವಾಲುಗಳನ್ನು ಹೊಂದಿವೆ ಮತ್ತು ಆ ಮಟ್ಟಿಗೆ, ಅದು ಅಂತಿಮವಾಗಿ ನಮ್ಮ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ತೋರಿಸುತ್ತದೆ.ಜಾಹೀರಾತುಹೆಚ್ಚಿನ ಆರ್ಥಿಕ ಬೆಳವಣಿಗೆ ದರಕ್ಕೆ ಹಣಕಾಸು ಒದಗಿಸಲು ಎಸ್‌ಬಿಐ ಸಿದ್ಧವಾಗಿದೆ ಎಂದು ಖಾರಾ ಹೇಳಿದರು.

“ಪ್ರಸ್ತುತ ಬಂಡವಾಳದೊಂದಿಗೆ ಸಹ, ನಾವು 7 ಲಕ್ಷ ಕೋಟಿ ರೂಪಾಯಿಗಳ ಆಸ್ತಿ ಬೆಳವಣಿಗೆಯನ್ನು ಬೆಂಬಲಿಸಬಹುದು. ಆದ್ದರಿಂದ, ರೂ 35 ಲಕ್ಷ ಕೋಟಿಗಳ ಆಧಾರದ ಮೇಲೆ ರೂ 7 ಲಕ್ಷ ಕೋಟಿಯ ರೀತಿಯ ಬೆಳವಣಿಗೆಯು ಶೇಕಡ 20 ಕ್ಕಿಂತ ಹೆಚ್ಚು. ಆದ್ದರಿಂದ, ನಾವು ಅಂತಹ ಪರಿಸ್ಥಿತಿಯಲ್ಲಿದ್ದೇವೆ. ನಾವು ಸಂಪೂರ್ಣವಾಗಿ ಸಜ್ಜಾಗಿದ್ದೇವೆ, ”ಎಂದು ಅವರು ಹೇಳಿದರು.ಕಳೆದ ಎರಡು ವರ್ಷಗಳಲ್ಲಿಯೇ ಎಸ್‌ಬಿಐ ಸುಮಾರು 65,000 ಕೋಟಿ ರೂಪಾಯಿ ಲಾಭವನ್ನು ಬಂಡವಾಳಕ್ಕೆ ಸೇರಿಸಿದೆ. ಈ ವರ್ಷ (FY’24) ಮೊದಲಾರ್ಧದಲ್ಲಿ, ಈಗಾಗಲೇ 31,000 ಕೋಟಿ ರೂ.ಗೂ ಹೆಚ್ಚು ಲಾಭ ಗಳಿಸಿದೆ. “ನಾವು ವರ್ಷಾಂತ್ಯದ ಲಾಭದ ಗಮನಾರ್ಹ ಭಾಗವನ್ನು ಮರಳಿ ಉಳುಮೆ ಮಾಡುತ್ತೇವೆ” ಎಂದು ಅವರು ಹೇಳಿದರು.ಎಸ್‌ಬಿಐನ ಒಟ್ಟು ಸಾಲದ ಪುಸ್ತಕದ ಗಾತ್ರ 35 ಲಕ್ಷ ಕೋಟಿ ರೂ. ಚಿಲ್ಲರೆ ಪುಸ್ತಕ 12 ಸಾವಿರ ಕೋಟಿ, ಅದರಲ್ಲಿ 7 ಲಕ್ಷ ಕೋಟಿ ಅಡಮಾನ. ಎಂಎಸ್‌ಎಂಇ ಪುಸ್ತಕವು ಸುಮಾರು 3.8 ಲಕ್ಷ ಕೋಟಿ ರೂ. ಮತ್ತು ಕೃಷಿಯು ಸುಮಾರು 2.8 ಲಕ್ಷ ಕೋಟಿ ರೂ. ಮಧ್ಯಮ-ಕಾರ್ಪೊರೇಟ್ ಪುಸ್ತಕವು ಸುಮಾರು 5 ಲಕ್ಷ ಕೋಟಿ ರೂ. ಮತ್ತು ದೊಡ್ಡ ಕಾರ್ಪೊರೇಟ್ ರೂ. 4.5 ಲಕ್ಷ ಕೋಟಿ.

ಹೀಗೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಿದರು.