ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭ..! ಗಡಿ ತಾಲೂಕು ಕಾಗವಾಡದಲ್ಲಿ ಹೆಚ್ಚಿದ ಬಂದೋಬಸ್ತ..!!

0

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭ..! ಗಡಿ ತಾಲೂಕು ಕಾಗವಾಡದಲ್ಲಿ ಹೆಚ್ಚಿದ ಬಂದೋಬಸ್ತ..!!

ಪ್ರತಿ ವರ್ಷದಂತೆ ಈ ವರ್ಷವೂ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಇಂದಿನಿAದ ಪ್ರಾರಂಭಗೊಂಡಿದ್ದು, ಮಹಾರಾಷ್ಟದ ಗಡಿ ತಾಲೂಕು ಕಾಗವಾಡದಲ್ಲಿ ಪೋಲಿಸರು ಬಿಗಿ ಬಂದೋಬಸ್ತ ಮಾಡಿದ್ದು, ಮಹಾರಾಷ್ಟದಿಂದ ಬರುವ ವಾಹನಗಳನ್ನು ಪರೀಶಿಲನೆ ಮಾಡಿ ರಾಜ್ಯದಲ್ಲಿ ಎಂಟ್ರಿ ನೀಡುತ್ತಿದ್ದಾರೆ.

ಬೆಳಗಾವಿಯಲ್ಲಿ ಅಧಿವೇಶನ ಪ್ರಾರಂಭಗೊಂಡರೇ ಸಾಕು ಇತ್ತ ಮಹಾರಾಷ್ಟ ಏಕೀಕರಣ ಸಮೀತಿಯವರು ಮಹಾರಾಷ್ಟದ ರಾಜಕಾರಣಿಗಳನ್ನು, ಪುಂಡರನ್ನು ಕರೆಯಿಸಿ, ಮಹಾ ಮೇಳಾವ ನಡೆಸಲು ಪ್ರಯತ್ನ ಮಾಡುತ್ತಾ ಬಂದಿರುತ್ತಾರೆ.

ಆದರೇ ಈ ವರ್ಷ ಬೆಳಗಾವಿಯಲ್ಲಿ ಎಂಇಎಸ್‌ನವರಿಗೆ ಮಹಾ ಮೇಳಾವಾ ಮಾಡಲು ಪೋಲಿಸ್ ಇಲಾಖೆ, ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದು, ಆದ್ದರಿಂದ ಮಹಾರಾಷ್ಟದ ಗಡಿಯಲ್ಲಿ ಪೋಲಿಸರು ಬಿಗಿ ಬಂದೋಬಸ್ತ ಮಾಡಿ, ಮಹಾರಾಷ್ಟçದಿಂದ ಬರುವ ವಾಹನಗಳನ್ನು ಪರೀಶಿಲಿಸಿ, ರಾಜ್ಯಕ್ಕೆ ಬಿಡುತ್ತಿದ್ದಾರೆ. ಕಾಗವಾಡ ತಾಲೂಕಿನ ಮಹಾರಾಷ್ಟ್ರ ಕರ್ನಾಟಕ ಗಡಿ ಭಾಗದ ಆರ್‌ಟಿಓ ಆಫೀಸ್ ಬಳಿ ಕಾಗವಾಡ ಪೋಲಿಸರು ವಾಹನಗಳನ್ನು ತಪಾಸಣೆ ಮಾಡಿ ರಾಜ್ಯದಲ್ಲಿ ಬಿಡುತ್ತಿದ್ದಾರೆ. ಅಥಣಿ ಡಿವೈಎಸ್ಪಿ ಅವರ ನೇತೃತ್ವದಲ್ಲಿ ನಡೆದ ಪೊಲೀಸ್ ಸರ್ವಗಾವಲು ಹಾಕಲಾಗಿದೆ.