ಧಾರವಾಡ: ಹಾಡಬೇಕು ಬಾಯಿ ತುಂಬ ಅಯ್ಯಪ್ಪನಾಮವ ನೋಡಬೇಕು ಕಣ್ತುಂಬ ಅಯ್ಯಪ್ಪ ಮಹಾಪೂಜೆಯ

0

ಧಾರವಾಡ: ಹಾಡಬೇಕು ಬಾಯಿ ತುಂಬ ಅಯ್ಯಪ್ಪನಾಮವ ನೋಡಬೇಕು ಕಣ್ತುಂಬ ಅಯ್ಯಪ್ಪ ಮಹಾಪೂಜೆಯ !

ಧಾರವಾಡ: ಸಕಲ ಜೀವರಾಶಿಗೆ ಒಳಿತು ಬಯಸುವ ನಿಟ್ಟಿನಲ್ಲಿ ಲೋಕ ಕಲ್ಯಾಣಕ್ಕಾಗಿ ವರ್ಷದ 365 ದಿವಸಗಳ ಕಾಲ ನಿತ್ಯ ನಿರಂತರವಾಗಿ ಶ್ರೀ ಅಯ್ಯಪ್ಪನ ಪೂಜೆ ನೆರವೇರಿಸಿಕೊಂಡು ಬರುತ್ತಿರುವ ಶ್ರೀ ಧರ್ಮಶಾಸ್ತ್ರ ಸೇವಾ ಸಮಿತಿ ಸಂಸ್ಥಾಪಕ ಶ್ರೀ ರಮೇಶ ಪಾತ್ರೋಟ ಗುರುಸ್ವಾಮಿಗಳು.

ಶ್ರೀ ರಮೇಶ ಪಾತ್ರೋಟ ಗುರುಸ್ವಾಮಿಗಳು ನೇತೃತ್ವದಲ್ಲಿಂದು ಶ್ರೀ ಅಯ್ಯಪನ ಪೂಜೆ ಹಾಗೂ ಅಂಬಾರಿ ಮೆರವಣಿಗೆ ಭಕ್ತರ ಇಷ್ಟಾರ್ಥ ಸಿದ್ದಿಗಾಗಿ ಬೆಳಗ್ಗೆ ಅಭಿಷೇಕ ಹಾಗೂ ಭಜನಾ ಕಾರ್ಯಕ್ರಮ ಮತ್ತು ಪೂಜಾ ವಿಧಿವಿಧಾನಗಳು ನೆರವೇರಿದವು.

ನಂತರ ಉಡುಪಿಯ ಶ್ರೀಧರ ಭಟ್ಟ ಅವರಿಂದ ಚಂಡಿಕಾ ಹೋಮ ಮತ್ತು ಅಭಿಷೇಕ ಹಾಗೂ ಕುಂಭಮೇಳ ಭಜನಾ ಕಾರ್ಯಕ್ರಮ ಮತ್ತು ಪೂಜಾ ವಿಧಿವಿಧಾನಗಳು ನೆರವೇರಿತು. ಮಧ್ಯಾಹ್ನ 3 ಕ್ಕೆ ರಮೇಶ ಪಾತ್ರೋಟ ಗುರುಸ್ವಾಮಿಜಿ ಅಧ್ಯಕ್ಷತೆಯಲ್ಲಿ ಸಿದ್ಧಾರೂಢ ಮಠದ ಶ್ರೀ ಶಿವಪುತ್ರ ಸ್ವಾಮಿಜಿ, ತೆಂಕಲಗೂಡ ಮಠದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ಸಾನಿಧ್ಯದಲ್ಲಿ ಸಮಾರಂಭ ನಡೆಯಿತು.

ವಿಜಯಾನಂದ ಶೆಟ್ಟಿ, ಮಹೇಶ ಶೆಟ್ಟಿ ಪಡಿ ಪೂಜೆ ನೆರವೇರಿಸಿದರು, ಪಾಲಿಕೆ ಸದಸ್ಯ ಮಂಜು ಬಟ್ಟಣ್ಣವರ ಕಳಶ ಪೂಜೆ ನೆರವೇರಿಸಿದರೆ ಪಾಲಿಕೆ ಸದಸ್ಯ ಶಿವು ಹಿರೇಮಠ ಹಾಗೂ ರವಿ ಜಾಧವ ಕುಂಭ ಪೂಜೆ ನೆರವೇರಿಸಿದರು. ನಂತರ ದೇವಸ್ಥಾನದಿಂದ ಬೃಹತ್ ರಥ, ಕಲಾ ತಂಡ ವಿವಿಧ ವಾಧ್ಯ ಮತ್ತು ಕುಂಭ ಮೇಳಗಳೊಂದಿಗೆ ಅಯ್ಯಪ್ಪ ಸ್ವಾಮಿ ಮೆರವಣಿಗೆ ಹೊರಟಿತು.

ಶಹರದ ರೆವೆನ್ಯು ಕಾಲನಿ, ಸಾಯಿ ಮಂದಿರ ರಸ್ತೆ, ದಾಸನಕೊಪ್ಪ ಸರ್ಕಲ, ಸಪ್ತಾಪೂರ, ಜಯನಗರ, ಶ್ರೀನಗರ, ಶಕ್ತಿ ಕಾಲೋನಿ ಮೂಲಕ ವಿವಿಧ ಮುಖ್ಯ ರಸ್ತೆ ಮೂಲಕ ಸಂಚರಿಸಿ ಮರಳಿ ದೇವಸ್ಥಾನ ತಲುಪಿತು. ಉತ್ಸವ ಸಮಿತಿ ಅಧ್ಯಕ್ಷ ಉದಯ ಶೆಟ್ಟಿ ಉಪಸ್ಥಿತರಿದ್ದರು.