ಅಥಣಿ ತಾಲುಕವನ್ನು ಜಿಲ್ಲೆಯನ್ನಾಗಿ ಮಾಡಲು ತಹಸೀಲ್ದಾರಗೆ ಮನವಿ

0

ಅಥಣಿ ತಾಲುಕವನ್ನು ಜಿಲ್ಲೆಯನ್ನಾಗಿ ಮಾಡಲು ತಹಸೀಲ್ದಾರಗೆ ಮನವಿ:

ಕಾಗವಾಡ: ಬೆಳಗಾವಿ ಜಿಲ್ಲೆಯಲ್ಲಿ ಅತೀ ದೊಡ್ಡ ತಾಲೂಕಾಗಿರುವ ಅಥಣಿಯನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಕಾಗವಾಡ ಘಟಕ ಸರ್ಕಾರನ್ನು ಒತ್ತಾಯಿಸಿದ್ದು, ತಹಶೀಲ್ದಾರ ರಾಜೇಶ ಬುರ್ಲಿ ಮುಖಾಂತರ ಮನವಿ ಸಲ್ಲಿಸಿದೆ.

ದಲಿತ ಮುಖಂಡರಾದ ಸಂಜಯ ತಳವಳಕರ, ಪ್ರಕಾಶ ಧೋಂಡಾರೆ ಮತ್ತು ಜಯಪಾಲ ಬಡಿಗೇರ ಮಾತನಾಡಿ, ಅಥಣಿಯನ್ನು ಜಿಲ್ಲೆಯನ್ನಾಗಿ ಮಾಡಬೇಕೆಂಬುದು ಬಹು ದಿನಗಳ ಬೇಡಿಕೆಯಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಅದಲ್ಲದೇ ಜನಸಂಖ್ಯೆ, ವಿಸ್ತೀಣ, ಶಿಕ್ಷಣ, ಕೈಗಾರಿಕೆ, ಕಂದಾಯ ಸಂಗ್ರಹ, ಉದ್ಯೋಗ ಆವಕಾಶದಲ್ಲಿ ಸಾಕಷ್ಟು ಮುಂದಿರುವ ಕ್ಷೇತ್ರವಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ.

ಜಿಲ್ಲೆಯಾಗುವ ಎಲ್ಲ ಅರ್ಹತೆಗಳನ್ನು ಅಥಣಿ ಪಟ್ಟಣ ಹೊಂದಿದ್ದು, ಬೆಳಗಾವಿಯಲ್ಲಿ ನಡೆದಿರುವ ಅಧಿವೇಶನದಲ್ಲಿ ಅಥಣಿ ಜಿಲ್ಲೆಯ ಬಗ್ಗೆ ಚರ್ಚೆ ಮಾಡಿ, ಮಸೂದೆ ಪಾಸು ಮಾಡಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಆಗ್ರಹಿಸಿದೆ.

ಈ ಸಮಯದಲ್ಲಿ ದಲಿತ ಮುಖಂಡರಾದ ಸಂಜಯ ತಳವಳಕರ, ವಿಜಯ ಅಸೋದೆ, ಸಂದೀಪ ಬಿರಣಿಗೆ, ಬಾಳಾಸಾಹೇಬ ಕಾಂಬಳೆ  ಪ್ರಕಾಶ ಧೋಂಡಾರೆ, ಪ್ರಕಾಶ ಕಾಂಬಳೆ, ವಿಶಾಲ ಧೋಂಡಾರೆ, ಜನಾರ್ಧನ ಧೋಂಡಾರೆ, ವಿದ್ಯಾಧರ ಧೋಂಡಾರೆ, ಈಶ್ವರ ಕಾಂಬಳೆ, ದೀಕ್ಷಿತ ವಕೀಲರು, ಜಯಪಾಲ ಬಡಿಗೇರ, ಹನಮಂತ ಮದಾವೆ., ಪರಶುರಾಮ ಕಾಂಬಳೆ, ರವಿ ಕುರಣೆ, ಗೌತಮ ಕಾಂಬಳೆ, ರವಿ ಕಾಂಬಳೆ, ಮಾಧವಾನಂದ ಮೇತ್ರಿ, ರಾಜು ಪವಾರ, ಸಂತೋಷ ಪರತನವರ, ಪ್ರಿಯಾ ಕಾಂಬಳೆ, ರಾಜು ಕಾಂಬಳೆ ಅನೀಲ ಚೌವ್ಹಾಣ, ಸೇರಿದಂತೆ ದಸಸಂನ ಕಾಗವಾಡ ತಾಲೂಕಿನ ಎಲ್ಲ ಪದಾಧೀಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಫೋಟೋ ಶಿರ್ಷಿಕೆ: (11 ಕಾಗವಾಡ-1) ಅಥಣಿ ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಕಾಗವಾಡ ದಸಸಂ ಪದಾಧೀಕಾರಿಗಳಿಂದ ತಹಶೀಲ್ದಾರ ರಾಜೇಶ ಬುರ್ಲಿ ಅವರಿಗೆ ಮನವಿ ಸಲ್ಲಿಸುತ್ತಿರುವ ಚಿತ್ರ. ಸಂಜಯ ತಳವಳಕರ, ಪ್ರಕಾಶ ಧೋಂಡಾರೆ, ಜಯಪಾಲ ಬಡಿಗೇರ ಸೇರಿದಂತೆ ಇತರರು ಚಿತ್ರದಲ್ಲಿದ್ದಾರೆ.

Amazon offers : Click here.

Guruvani Digital Media