ರೈತರ ಜಮೀನುಗಳಿಗೆ ಕಾರ್ಖಾನೆಯ ಕಲುಷಿತ ನೀರನ್ನು ಬಿಡದಂತೆ ತಹಶೀಲ್ದಾರರಿಗೆ ಮನವಿ

0

ರೈತರ ಜಮೀನುಗಳಿಗೆ ಕಾರ್ಖಾನೆಯ ಕಲುಷಿತ ನೀರನ್ನು ಬಿಡದಂತೆ ತಹಶೀಲ್ದಾರರಿಗೆ ಮನವಿ

ಕಾಗವಾಡ: ಪಟ್ಟಣದ ಶಿರಗುಪ್ಪಿ ಶುಗರ್ಸ್ ನಿಂದ ಶೇಡಬಾಳ ಪಟ್ಟಣದಲ್ಲಿ ಕಾರ್ಖಾನೆಯ ಕೆಮಿಕಲ್ ಯುಕ್ತ ಕಲುಷಿತ ನೀರನ್ನು ಪೈಪಲೈನ್ ಮಾಡುತ್ತಿದ್ದು, ಈ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಜಯ ಕರ್ನಾಟಕ ಸಂಘಟನೆಯವರು ಹಾಗೂ ಗ್ರಾಮಸ್ಥರು ಉಪ ತಹಶಿಲ್ದಾರ ಅಣ್ಣಾಸಾಬ ಕೋರೆಯವರಿಗೆ ಮನವಿ ಸಲ್ಲಿಸಿದರು.

ನಂತರ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ವಿನೋದ ಕಾಂಬ್ಳೆ ಮಾತನಾಡಿ, ಈ ಹಿಂದಿನ ನಾಲ್ಕು ವರ್ಷಗಳ ಶಿರಗುಪ್ಪಿ ಸಕ್ಕರೆ ಕಾರ್ಖಾನೆಯವರು ವಿಷಕಾರಿಯುಕ್ತ ಕಲುಷಿತ ನೀರನ್ನು ಕಾಗವಾಡದಿಂದ ಶೇಡಬಾಳ ಪಟ್ಟಣಕ್ಕೆ ಬಿಡಲು ಪೈಪಲೈನ್ ಕಾಮಗಾರಿ ಆರಂಭಿಸಿದ್ದರು. ಅದರ ವಿರುದ್ದ ಅಲ್ಲಿನ ರೈತರೆಲ್ಲರೂ ವಿರೋಧ ವ್ಯಕ್ತಪಡಿಸಿದ್ದರಿಂದ ಕಾಮಗಾರಿ ಸ್ಥಗಿತಗೊಳಿಸಿದ್ದರು.

ಈಗ ಮತ್ತೆ ಅದೇ ಕಾಮಗಾರಿ ಪ್ರಾರಂಭ ಮಾಡಿದ್ದಾರೆ, ಇದು ಪೂರ್ಣಗೊಂಡ ಮೇಲೆ ಶೇಡವಾಳ ಪಟ್ಟಣ ರೈತರ ಜಮೀನುಗಳಿಗೆ ಹಾಗೂ ಕೆರೆ, ಬಾವಿಗಳಿಗೆ ಕೆಮಿಕಲ್ ಯುಕ್ತ ಕೆಮಿಕಲ್ ನೀರು ಸೇರ್ಪಡೆಗೊಂಡರೆ ಸಂಪೂರ್ಣ ಭೂಮಿಗಳು ಹಾಳಾಗುತ್ತವೆ, ಅಲ್ಲದೇ ಜನರಿಗೂ ತೊಂದರೆಯಾಗುತ್ತದೆ ಮತ್ತು ಅಲ್ಲಿನ ಪರಿಸರ ಸಂಪೂರ್ಣ ಹಾಳಾಗುತ್ತದೆ ಆದ್ದರಿಂದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶಿರಗುಪ್ಪಿ ಸಕ್ಕರೆ ಕಾರ್ಖಾನೆಯವರಿಗೆ ಅದನ್ನು ಬಂದ್ ಮಾಡುವಂತೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.

ಈ ವೇಳೆ ಕಾಗವಾಡ ತಾಲೂಕಾ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಬಸವರಾಜ್ ಮಗದುಮ್, ಶೇಡಬಾಳ ಪಟ್ಟಣ ಅಧ್ಯಕ್ಷ ವಿನೋದ ಕಾಂಬಳೆ, ಉಪಾಧ್ಯಕ್ಷರಾದ ಅನೀಲ್ ಹೆರಲೇ, ಕಾರ್ಯದರ್ಶಿ ಅದಿನಾಥ್ ಲಟ್ಕರ, ಸಂಜು ಅಲಾಸೆ, ಸುಕುಮಾರ್ ಪಾಟೀಲ್, ರಾಜು ಅಲಾಸೆ, ಬಾಬಾಸಾಬ ಕಾಂಬ್ಳೆ, ಸಂಪತಿ ಹೊಂನಕಾಂಬ್ಳೆ, ಸಂತೋಷ ತಳವಾರ, ಜಗ್ಗು ಮರಾಠಿ ,ಅನೀಲ್ ಇರಾಜ, ಅಣ್ಣಸಾಬ ಪಲ್ಲಕಿ ,ಮಾರುತಿ ಪಾಟೀಲ್ ,ಶೇಡಬಾಳ ಪಟ್ಟಣದ ರೈತ ಮುಖಂಡರು ಹಾಗೂ ಎಲ್ಲಾ ರೈತರು ಇದ್ದರು.